ಕಲಬುರಗಿ:ಮುಂಗಾರು ಮಳೆ ಹೋಗಿ ಬಿತ್ತಿದ ಬೀಜ ಹುಟ್ಟಿ ಕಮರಿ ಹೋದ ಸಂಕಟ ಈಗ ಅತಿಯಾದ ಮಳೆಯಿಂದ ಸಾಲ ಮಾಡಿ ಬಿತ್ತಿದ ಬೆಳೆ ಈಗ ಹುಟ್ಟಿ ನಿರುಪಾಲಾರದ ಇನ್ನೊಂದು ಸಂಕಟ ಇದ್ದ ಭೂಮಿ ನೀರಿಗೆ ಕೊಚ್ಚಿ ಹೋಗುತ್ತಿರುವುದು ಮತ್ತೊಂದು ಸಂಕಟದಲ್ಲಿ ಬದುಕುತ್ತಿರುವ ರೈತನಿಗೆ ಬೆಳೆ ಹಾನಿ ಹಾಗೂ ಪರಿಹಾರ ಕೊಡುವ ಮುಖಾಂತರ ಸ್ಪಂದಿಸಬೇಕು ಹಾಗೂ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಅನೇಕ ಮನೆಗಳು ಕುಸಿದು ಬಿದ್ದು ವಾಸಿಸಲು ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಕ್ಷಣ 5 ಲಕ್ಷದ ರೂ.ಮನೆಗಳನ್ನು ಮಂಜೂರು ಮಾಡಬೇಕು ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ ಅವರ ಸರಕಾರ ಇದ್ದಾಗ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಮನೆಗಳನ್ನು ಮತ್ತು ಬೆಳೆ ಹಾನಿಯಾದ ರೈತರಿಗೆ ತಕ್ಷಣ ಬೆಳೆ ಹಾನಿಯನ್ನು ಮಂಜೂರು ಮಾಡಿದ ಮಾದರಿಯಲ್ಲಿಯೇ ರಾಜಕೀಯ ಮಾಡದೆ ರೈತರಿಗೆ ಮತ್ತು ಮನೆ ಕಳೆದುಕೊಂಡ ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದರು.
ಮಳೆಯಿಂದ ಬೆಳೆ ಸಂಪೂರ್ಣ ನಾಶಗೊಂಡು ಮನೆ ಆಸ್ತಿ ಪಾಸ್ತಿ ಹಾಳಾಗಿವೆ ಇವುಗಳನ್ನು ಸಮೀಕ್ಷೆ ಮಾಡಲು ಬಾರದ ಮಂತ್ರಿಮಂಡಲ ಹಾಗೂ ಅಧಿಕಾರಿಗಳ ವರ್ಗಕ್ಕೆ ಸಂಕಷ್ಟದಲ್ಲಿ ನೊಂದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕೂಡಲೇ ಸರ್ಕಾರ ಇವುಗಳಿಗೆ ಸ್ಪಂದಿಸದೆ ಹೋದರೆ ಸರಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು.
-ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.