ಕಾರಟಗಿ : ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪಟ್ಟಣದ ಅವರ ಗೃಹ ಕಚೇರಿಗೆ ನೂರಾರು ಕುರಿಗಾಹಿಗಳು ಭೇಟಿ ನೀಡಿ ಸಚಿವರಿಗೆ ಕಂಬಳಿ ಹಾಕಿ ಸನ್ಮಾನಿಸಿ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಬಳಿಕ ಕುರಿಗಾಹಿಗಳು ಮಾತನಾಡಿ ರುದ್ರೇಶ್ ಅವರು ಕುರಿಗಳ ಬಗ್ಗೆ ಕುರಿಗಾಹಿಗಳ ಕಷ್ಟ-ನಷ್ಟವನ್ನು ತಿಳಿದವರು. ಜತೆಗೆ ಯುವಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಕಾರ್ಯ ಕಾರ್ಯ ನಿರ್ವಹಿಸಿದ್ದು ಜನರ ಕುಂದು ಕೊರತೆಗಳ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಎರಡನೇ ಅವಧಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ, ಹಾಗೂ ಕುರಿಗಾಹಿಗಳು ಯವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡರೆ ಕೂಡಲೇ ಸ್ಪಂದನೆ ಮಾಡುತ್ತಾರೆ. ಹೈನುಗಾರಿಕೆ ಮತ್ತು ಕುರಿಗಳ ಸಾಗಾಣಿಕೆ ಅನುಭವಿಗಳಾಗಿದ್ದು, ಹೀಗಾಗಿ ಅಂತ ವ್ಯಕ್ತಿಯನ್ನು ನಿಗಮಕ್ಕೆ ಆಯ್ಕೆ ಮಾಡುವುದರಿಂದ ಕುರಿಗಾಹಿಗಳಿಗೆ ಅನುಕೂಲವಾಗಲಿದೆ. ಅವರ ಸೇವೆಯನ್ನು ರಾಜ್ಯಾದ್ಯಂತ ಮಾಡಲು ಅವಕಾಶ ನೀಡಬೇಕೆಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಬೂದಗುಂಪಾ, ಹಿರಿಯ ಮುಖಂಡರು, ಕಾರ್ಯಕರ್ತರು ಸೇರಿ ನೂರಾರು ಕುರಿಗಾಹಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.