ಗದಗ:ಪಂಚಲೋಹಗಳ ಬೀಡು,ಉತ್ತರ ಕರ್ನಾಟಕದ ಸಹ್ಯಾದ್ರಿ ಎಪ್ಪತ್ತ ಗಿರಿಗಿಂತ ಕಪ್ಪತ್ತಗಿರಿ ಮೇಲು ಎಂಬ ಪ್ರಸಿದ್ಧಿ ಪಡೆದ ಶುದ್ಧ ಗಾಳಿ ಬೀಸುವ ಕಪ್ಪತ್ತಗುಡ್ಡದಲ್ಲಿ ಪ್ಲಾಸ್ಟಿಕ್ ಬಳಕೆ ಸೇರಿದಂತೆ ವಾಹನಗಳ ದಟ್ಟಣೆಯಿಂದ ನಿಸರ್ಗದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿತ್ತು ಇದನ್ನು ಮನಗಂಡ ಅರಣ್ಯ ಇಲಾಖೆ ಪರಿಸರಕ್ಕೆ ಪೂರಕವಾಗುವ ಯೋಜನೆಗಳನ್ನು ರೂಪಿಸಿದ್ಧು ಶ್ಲಾಘನೀಯವಾಗಿದೆ ಎಂದು ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅಭಿನಂದನೆ ಸಲ್ಲಿಸಿದ್ಧಾರೆ.
ಆಯುರ್ವೇದದ ಕಪ್ಪತ್ತಗುಡ್ಡದ ಪರಿಸರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್,ಮಧ್ಯದ ಬಾಟಲಿ,ಊಟದ ಮಾಡಿದ ಎಲೆಗಳನ್ನು ಎಸೆಯುತ್ತಿದ್ಧರು ಕಸದ ರಾಶಿಯಿಂದ ಗುಡ್ಡದ ಪರಿಸರದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿತ್ತು ಅರಣ್ಯ ಇಲಾಖೆ ಕಪ್ಪತ್ತಗುಡ್ಡಕ್ಕೆ ಹೋಗುವ ಮಾರ್ಗದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿತ್ತು ಪರಿಸರ ಕಾಳಜಿ ಮೆರೆದ ಅರಣ್ಯ ಇಲಾಖೆ ಕಪತಗುಡ್ಡಕ್ಕೆ ಹೋಗುವ ಮಾರ್ಗದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದಿದ್ಧು (ಚೆಕ್ ಪೋಸ್ಟ್) ಮತ್ತು ಸಿಬ್ಬಂದಿಗಳನ್ನು ನೇಮಿಸಿದ್ಧು ಹಾಗೂ ಚಾರಣ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದ್ಧು ಸ್ವಾಗತರ್ಹ ಎಂದು ಹಳ್ಳಿಕೇರಿಮಠ ಸಂತಸ ವ್ಯಕ್ತಪಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.