ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ,
ಧಾರವಾಡದ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹರಡುತ್ತಿರುವ ಮದ್ರಾಸ್ ಐ ರೋಗದಿಂದಾಗಿ ಜಿಲ್ಲೆಯ ಎಲ್ಲ ಶಾಲೆಯ ಮಕ್ಕಳಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಎಲ್ಲ ಕಡೆಗೆ ವೇಗವಾಗಿ ಹಬ್ಬಿತ್ತಿರುವುದು ವಿಷಾದನೀಯ ಇದರಿಂದ ಶಾಲೆಯ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ ಅಲ್ಲದೆ ಇದು ಸಾಂಕ್ರಾಮಿಕ ರೋಗವಾದ್ದರಿಂದ ಇದರ ಬಗ್ಗೆ ಅರಿವು ಇರದ ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಬೇಗನೆ ಹರಡುತ್ತದೆ ಕಾರಣ ಶಾಲೆ ಮಕ್ಕಳಿಲ್ಲಿ ಸೂಕ್ತ ರೀತಿಯಲ್ಲಿ ಮದ್ರಾಸ್ ಆಯ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ ಜಾದವ,ಮಲ್ಲಿಕಾರ್ಜುನ ಅಸುಂಡಿ,ಅರ್ಷದ ಪಠಾಣ,ಅನ್ವರ್ ನಧಾಪ,ಎಂ ಮಲ್ಲು,ಅರುಣ ತೇಲಿಗಾರ,ಸಂತೋಷ ಇಂಗಳೆ,ರವಿ ಪಾಟೀಲ ಯೋಗೇಶ ಪೊಳ,ಪ್ರಮೋದ್ ಶೆಟ್ಟಿ,ರಾಜು ಆಲೂರು, ಮಂಜುನಾಥ ಕಮ್ಮಾರ,ಮನೋಹರ ವಾಘ್ಮೋರೆ, ಪ್ರಕಾಶ ಹುಕ್ಕೇರಿ, ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.