ಯಾದಗಿರಿ:ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳು ಪ್ರತಿದಿನ ತಮ್ಮದೇ ಆದ ಚಟುವಟಿಕೆ ಕ್ರಿಯಾ ಶೀಲರಾಗಿರುತ್ತಾರೆ ಹೀಗಾಗಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶಿಶುಪಾಲನೆ ಮತ್ತು ಪೋಷಣೆ ಮಾಡಿ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಯಾದಗಿರಿ,ತಾಲೂಕ ಪಂಚಾಯತ್ ಶಹಾಪುರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ 9/8/2023 ರಂದು ಶಹಾಪುರ ತಾಲ್ಲೂಕ ಪಂಚಾಯಿತಿ ವಿಕಾಸ ಸೌಧದ 9 ರಲ್ಲಿ ಗ್ರಾಮ ಪಂಚಾಯಿತಿ ಶಿಶುಪಾಲನ ಕೇಂದ್ರಗಳ ಶಿಶು ಕೇರ್ ಟೇಕರ್ ಗಳಿಗಾಗಿ ಹಮ್ಮಿಕೊಂಡ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಮಹಿಳಾ ಕೂಲಿ ಕಾರ್ಮಿಕರ 6 ವರ್ಷದೊಳಗಿನ ಮಕ್ಕಳ ಆರೋಗ್ಯ ಪೌಷ್ಟಿಕತೆ ಹಾಗೂ ಸುರಕ್ಷತೆಗಾಗಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಸುತ್ತೋಲೆ ಮಗುವಿನ ಮನೆ ಶಿಶುಪಾಲನ ಕೇಂದ್ರ ಆರಂಭಿಸಲಾಗುತ್ತಿದೆ.
ಮಗುವಿನ ಮನೆಯ ಸದುಪಯೋಗ ಪಡೆಯುವ ಮೂಲಕ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಕೂಲಿ ಕಾರ್ಮಿಕರ ಮಕ್ಕಳಿಗೆ ಪಾಲನೆ ಪೋಷಣೆ ಕೇಂದ್ರಗಳು ಆರಂಭಿಸಿದ್ದು ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಶಿಶುಪಾಲನ ಕೇಂದ್ರಗಳಲ್ಲಿ ಬಿಟ್ಟು ಹೋದರೆ ತಾಯಂದಿರು ಕೆಲಸ ಮಾಡಿ ಬರುವವರೆಗೆ ಮಗುವಿನ ಮನೆಯಲ್ಲಿ ಆರೈಕೆ ಮಾಡಲಾಗುತ್ತದೆ ಎಂದು ಹೇಳಿದರು.ಶಿಶುಪಾಲನಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸ್ವಂತ ಮಕ್ಕಳಂತೆ ಆರೈಕೆ ಮಾಡುವುದು ಮತ್ತು ಕೇರ್ ಟೇಕರ್ ಜವಾಬ್ದಾರಿಯಾಗಿದೆ.ಶಿಶುಪಾಲನಾ ಕೇಂದ್ರದ ಮಗುವಿನ ಆರೈಕೆ ಮಾಡುವ ಕುರಿತು ನಾಲ್ಕು ದಿನಗಳ ಕಾಲ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಮಕ್ಕಳ ಆರೈಕೆ ಮಾಡಿ ಮಗುವಿನ ಮನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮಗುವಿಗೆ ಮನೆಯಲ್ಲಿ ಮಕ್ಕಳ ಆರೈಕೆಗೆ ಅಗತ್ಯವಾದ ಮೂಲ ಸೌಲಭ್ಯಗಳು,ಪ್ರಥಮ ಚಿಕಿತ್ಸಾ,ಆಟಿಕೆ ಸಾಮಾನುಗಳು, ಕಲಿಕಾ ಸಾಮಗ್ರಿಗಳು,ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ,ಅಕ್ಷರ ಜ್ಞಾನ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಶಹಾಪುರ ತಾಲೂಕ ಪಂಚಾಯತಿ,ತಾಲೂಕ ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ,ಸಹಾಯಕ ನಿರ್ದೇಶಕರು ಭೀಮರಾಯ ಬಿರಾದಾರ್,ತಾಲೂಕ ಪಂಚಾಯತ ನಿರ್ವಾಹಕ ಅಜಿತಕುಮಾರ್,ಶಿಶುಪಾಲನ ಕೇಂದ್ರದ ಶಿಕ್ಷಕಿ ಶ್ರೀಮತಿ ಕವಿತಾ ಕುಲಕರ್ಣಿ ಹಾಗೂ ಶಹಾಪುರ ಮತ್ತು ವಡಗೇರಾ ತಾಲೂಕ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಶಿಶುಪಾಲನ ಕೇಂದ್ರಗಳ ಕೇರ್ ಟೇಕರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.