ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ಆಶ್ರಮದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಮ್ಮ 35ನೇ ಹುಟ್ಟು ಹಬ್ಬವನ್ನು ಕಾರಣ್ಯ ಆಶ್ರಮದ ಶ್ರಮಜೀವಿಗಳಿಗೆ ಸನ್ಮಾನಿಸಿ,ಬಾಳೆಹಣ್ಣು ವಿತರಿಸಿ ಹಿರಿಯ ಜೀವಿಗಳಿಂದ ಆರ್ಶೀವಾದ ಪಡೆದರು.ಈ ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಸಸಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರುಣ್ಯ ಆಶ್ರಮದ ಚನ್ನಬಸವ ಹಿರೇಮಠ ಅವರು ಮಾತನಾಡಿ ಪರಿಸರ ಸೇವೆ,ರಕ್ತದಾನ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ತುಂಬಾ ಶ್ಲಾಘನೀಯ ಅವರು ಪರಿಸರ ಸೇವೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಸಿಂಧನೂರಿನ ಅಮರ ಶ್ರೀ ಆಲದ ಮರವನ್ನು ತಾಯಿ ಮಗುವಿನಂತೆ ಪೋಷಣೆ ಮಾಡಿದ್ದಾರೆ ಅವರ ಸೇವೆ ರಾಜ್ಯಾದ್ಯಂತ ನಿರಂತರವಾಗಿ ನಡೆಯಲಿ ಅವರು ಜೀವನದಲ್ಲಿ ದೇವರು ಸುಖ ಶಾಂತಿ ನೀಡಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಚನ್ನಬಸವ ಹಿರೇಮಠ,ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ,ಅಕ್ಷಯ ಆಹಾರ ಜೋಳಿಗೆಯ ಅಶೋಕ ನಲ್ಲಾ,ನಾಗರಾಜ ಸಿಂಗಾಪುರ, ಸಹಕಾರ್ಯದರ್ಶಿ ರಂಜಾನ್ ಸಾಬ್,ಜಿಲ್ಲಾ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ,ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ,ಮಾಧ್ಯಮ ಮಿತ್ರರಾದ ಶರಣಬಸವ ಚನ್ನಳ್ಳಿ,ಯಮನೂರ ಹಾಗೂ ಕಾರುಣ್ಯ ಆಶ್ರಮದ ಹಿರಿಯರು ಮುಂತಾದವರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.