ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಗಳಾಗಿ ಅಧಿಕಾರ ವಹಿಸಿರುವ ಗಂಗೂಬಾಯಿ ಮಾನಕರ್ ಅವರು ಮೊದಲ ಬಾರಿಗೆ ಮುಂಡಗೋಡ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸೌಲಭ್ಯಗಳು ಹಾಗೂ ಇಲ್ಲಿನ ಕುಂದು ಕೊರತೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿರುವ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳಿಗೆ ಸರಿಯಾಗಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಾಗುತ್ತಿದೆ ಇಲ್ಲವೇ ಎಂದು ಕೇಳಿದರು.
ನಂತರ ಹೆರಿಗೆ ವಿಭಾಗಕ್ಕೆ ತೆರಳಿ ಇತ್ತೀಚಿನ ದಿನಗಳಲ್ಲಿ ಹೆರಿಗೆ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವ ಕುರಿತು ತಾಲೂಕ ವೈದ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದು ಆಸ್ಪತ್ರೆ ಬೇಕಿರುವ ಅನಸ್ತೇಶಿಯಾ ವಿಭಾಗಕ್ಕೆ ಕಾಯಂ ಇಲ್ಲವೇ ಗುತ್ತಿಗೆ ಅವಧಿಗೆ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ನಿರ್ಮಿಸಿರುವ ಅಪೌಷ್ಠಿಕ ಮಕ್ಕಳ ರೆಹಬಿಲೇಷನ್ ಸೆಂಟರ್ ಗೆ ಭೇಟಿ ನೀಡಿ ಅಪೌಷ್ಠಿಕ ಮಕ್ಕಳ ದಾಖಲಾತಿಯ ಕಡಿಮೆ ಆಗಿರುವುದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲು ಆಸ್ಪತ್ರೆ ವೈದ್ಯಾಧಿಕಾರಿ ಅವರಿಗೆ ಸೂಚಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಮೊದಲ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಆಸ್ಪತ್ರೆಯಲ್ಲಿ ಆಗಿರುವ ಕುಂದು ಕೊರತೆಗಳು ಗಮನಕ್ಕೆ ಬಂದಿದ್ದು,ಸದ್ಯ ಆಸ್ಪತ್ರೆಗೆ ಬೇಕಿರುವ ವೈದ್ಯರ ಕೊರತೆಯನ್ನು ಸದ್ಯದಲ್ಲೇ ಪರಿಹರಿಸಲಾಗುವುದು ಸ್ಕ್ಯಾನಿಂಗ್ ವಿಭಾಗಕ್ಕೆ ಬೇಕಿರುವ ರೆಡಿಯೋಲಾಜಿಸ್ಟ್ ಗಳನ್ನ ನೇಮಕ ಮಾಡಲಾಗುವುದು ಎಂದು ತಿಳಿಸಿದರು
ಜಿಲ್ಲಾಧಿಕಾರಿಗಳ ಭೇಟಿ ವೇಳೆ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರಾದ ದೇವರಾಜ್ ಆರ್, ಮುಂಡಗೋಡ ತಾಲೂಕ ತಹಶೀಲ್ದಾರ್ ಗಳಾದ ಶಂಕರ್ ಗೌಡಿ ಹಾಗೂ ತಾಲೂಕ ವೈದ್ಯಾಧಿಕಾರಿಯಾದ ನರೇಂದ್ರ ಪವಾರ್ ಅವರು ಹಾಜರಿದ್ದರು.