ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮರಕಲ್ ಗ್ರಾಮದಲ್ಲಿ ಪ್ರತಿ ಗುರುವಾರದಂದು ಮಕ್ಕಳಿಗೆ ಆರೋಗ್ಯ ತಪಾಸಣೆ,ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ಇಂದ್ರ ಧನುಷ್ ಲಸಿಕೆ ಹಾಕುವಾಗ ಅಂಗನವಾಡಿ ಮೇಲ್ಚಾವಣಿ ಕುಸಿದು ಬಿದ್ದಿರುವುದರಿಂದ ಮಗು ಕೀರ್ತಿ(ತಾಯಿ ಮಲ್ಲಮ್ಮ) ಅವರ ಮಗುವಿನ ಬಿದ್ದ ಕಾರಣ ಕೀರ್ತಿ ಗಂಭೀರವಾಗಿ ಗಾಯಗೊಂಡು ಕೂಡಲೇ ತಾಲೂಕ ಆರೋಗ್ಯ ಅಧಿಕಾರಿ ಡಾ|| ರಮೇಶ್ ಗುತ್ತಿಗೆದಾರವರ ನಿರ್ದೇಶನ ಮೇರೆಗೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಣ್ಣ ನುಚ್ಚಿನವರು ಮುಂಜಾಗ್ರತೆಯಿಂದ ಸಮೀಪದ ದೇವದುರ್ಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಧಾರಾಕಾರವಾಗಿ ಮಳೆ ಸುರಿದ ಕಾರಣ ಅಂಗನವಾಡಿ ಕೇಂದ್ರ ಮಳೆಗೆ ಶಿಥಿಲಗೊಂಡಿವೆ ಇದರಿಂದ ತೀವ್ರ ಕ್ರಮಕ್ಕೆ ಮುಂದಾಗದೆ ಸಿ.ಡಿ.ಪಿ.ಓ ಅಧಿಕಾರಿಗಳು ಉಡಾಫೆ ಉತ್ತರಗಳನ್ನು ನೀಡುತ್ತಾ ಸೂಕ್ತ ಕ್ರಮ ಜರುಗಿಸದೆ ಇರುವದು ಈ ಅವಘಡಗಳಿಗೆ ಕಾರಣ ಎನ್ನಲಾಗುತ್ತಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ