ಕೆ.ಜಿ.ವಿ.ಎಸ್ ಧಾರವಾಡ ಜಿಲ್ಲೆ. ಎ. ಎಂ. ಆರ್ ಸಂಜೀವಿನಿ ಸಂಸ್ಥೆ ಅರಕೇರಿ 2 ಹಾಗೂ ಸ್ಪೂರ್ತಿ ಕರಿಯರ್ ಅಕ್ಯಾಡೆಮಿ ಸ್ಪಧಾ೯ಚುಕ್ಕಿ ಗ್ರೂಪ್ ಹುಬ್ಬಳ್ಳಿ ಮತ್ತು ನೋಬಲ್ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೆಜಿವಿಎಸ್ ಜಿಲ್ಲಾ ಸಮ್ಮೇಳನ ಹಾಗೂ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ವಿಶೇಷ ಉಪನ್ಯಾಸ ವೈಚಾರಿಕತೆ ಮತ್ತು ವೈಜ್ಞಾನಿಕ ಸಂದೇಶ ನೀಡುವ ಕವಿಗೋಷ್ಠಿ ಮತ್ತು ಪವಾಡ ಬಯಲು ಕಾರ್ಯಕ್ರಮವು ಇದೇ ಆಗಸ್ಟ್ 13 ರಂದು ರವಿವಾರ ಮಧ್ಯಾಹ್ನ 3-00 ಗಂಟೆಗೆ ಹುಬ್ಬಳ್ಳಿಯ ನೇಕಾರನಗರದ ನೇತಾಜಿ ಕಾಲೋನಿ ಬೆನ್ನೂರು ಪ್ಲಾಟಿನಲ್ಲಿರುವ ನೋಬಲ್ ಪಬ್ಲಿಕ್ ಸ್ಕೂಲ್ ನಡೆಯಲಿದೆ.ಈ ಕಾಯ೯ಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಈ.ಬಸವರಾಜು ಉದ್ಘಾಟಕರಾಗಿ ಶ್ರೀ ಸದಾನಂದ ಡಂಗನವರ ಪ್ರೊ ಎ ಎಮ್ ಸಾತ್ಮಾರ ಶ್ರೀ ಸಿರಾಜ್ ಅಹ್ಮದ್ ಕುಡಚಿವಾಲೆ ಡಾ ಸುರೇಶ್ ಹೊರಕೇರಿ ಪ್ರೋ ಎಸ್ ಆರ್ ಆಶಿ ಡಾ ವಿ ಬಿ ನಿಟಾಲಿ ಡಾ ಸಿ ತ್ಯಾಗರಾಜ ಡಾ ಹೇಮಂತ ಕುಂದರಗಿ ಶಿವಾನಂದ ಬಿ ವಿ ಡಾ ಮಂಜುನಾಥ ಬಾರಕೇರ ಹಾಗೂ ಸಾಹಿತಿಗಳು ಕವಿಗಳು ಜಿಲ್ಲಾ ಮತ್ತು ತಾಲ್ಲೂಕುಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಜೆವಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಮೋತಿಲಾಲ ರಾಥೋಡ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ‘ವೈಜ್ಞಾನಿಕ ಮನೋದೃಷ್ಟಿ’ ಎಂಬ ವಿಷಯದಡಿಯಲ್ಲಿ ಕವನ ವಾಚನಕ್ಕೆ ಆಹ್ವಾನಿಸಲಾಗಿದ್ದು ಭಾಗವಹಿಸುವ ಕವಿಗಳು ಕೆಜಿವಿಎಸ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಮೋತಿಲಾಲ ರಾಥೋಡ್ 9880274452 ಅವರಲ್ಲಿ ನೊಂದಾಯಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.