ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಭವನ ಹನೂರಿನಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಕುರಿತು ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರೇಡ್ 2 ತಹಸಿಲ್ದಾರ್ ಡಾ.ಧನಂಜಯರವರು ಬೆಳೆ ಕಟಾವು ಪ್ರಯೋಗ ಮಹತ್ವವಾದದ್ದು ಬೆಳೆ ನಷ್ಟ ಅಂದಾಜು ಹಾಗೂ ನಿಖರವಾದ ಬೆಳೆ ಇಳುವರಿ ಮಾಹಿತಿಯನ್ನು ಪಡೆಯಲು ಬೆಳೆ ಕಟಾವು ಪ್ರಯೋಗ ಮಹತ್ವದ ಪಾತ್ರ ವಹಿಸುತ್ತದೆ.
ಸಹಾಯಕ ಸಾಂಖ್ಯಿಕ ಕ್ಷೇತ್ರ ಅಧಿಕಾರಿಗಳಾದ ಅನಿಲ್ ಕ್ರಿಸ್ಟಿ ಅವರು ಮಾತನಾಡಿ ಬೆಳೆಕಟಾವು ಪ್ರಯೋಗಗಳಿಂದ ಆಹಾರ ಮತ್ತು ಆಹಾರ ಪದಾರ್ಥಗಳು ಸರಾಸರಿ ಇಳುವರಿ ಮಾಹಿತಿಯನ್ನು ಅಂದಾಜು ಮಾಡಲು ಹಾಗೂ ಬೆಳೆ ವಿಮೆಯನ್ನು ಇತ್ಯರ್ಥ ಪಡಿಸಲು ಮೇವಿನ ಪ್ರಮಾಣವನ್ನು ಅಂದಾಜಿಸಲು ರೈತರಿಗೆ ನ್ಯಾಯಬದ್ಧ ವಿಮೆಯನ್ನು ನೀಡಲು ಬೆಳೆ ಕಟಾವು ಪ್ರಯೋಗ ಮಹತ್ವದ್ದು ಜಿಪಿಎಸ್ ಆಧಾರಿತ ಮೊಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು
ಸಾಂಖ್ಯಿಕ ನಿರೀಕ್ಷರಾದ ಮಹದೇವಸ್ವಾಮಿಯವರು ಮೊಬೈಲ್ ಆಪ್ ಮೂಲಕ ಬೆಳೆ ಕಟಾವು ಪ್ರಯೋಗಗಳನ್ನು ವಿವಿಧ ಬೆಳೆಗಳ ಮೇಲೆ 55 ಮೀಟರ್ ಹಾಗೂ 105 ಮೀಟರ್ ಪ್ರದೇಶದಲ್ಲಿ ಕಟಾವು ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸುದೀರ್ಘ ತರಬೇತಿಯನ್ನು ಸಹಾಯಕ ತೋಟಾಧಿಕಾರಿಗಳ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಈ ತರಬೇತಿ ಕಾರ್ಯಗಾರದಲ್ಲಿ ಸಾಂಖಿಕ ಅಧಿಕಾರಿ ಗಳಾದ ಅನಿಲ್ ಕ್ರಿಸ್ಟಿ,ಸುನಿತಾ ರವರು ಭಾಗವಹಿಸಿದರು ತೋಟಗಾರಿಕೆ ಅಧಿಕಾರಿಗಳಾದ ಕೃಷಿ ಅಧಿಕಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ದ್ವಿದಸ ಎ.ಎಂ.ಗಿರೀಶ್ ಮತ್ತು ಸಾಂಖ್ಯಾತ ನಿರೀಕ್ಷಕರಾದ ಮಹದೇವಸ್ವಾಮಿ ವಿಶ್ವಾಸ್ ಹಾಜರಿದ್ದರು.
