ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು
ಕರ್ನಾಟಕ ರಾಜ್ಯ ರೈತಸಂಘ ಮತ್ತು ಮತ್ತು ಹಸಿರು ಸೇನೆ ಸಂಘದವರಿಂದ ಮತ್ತು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ರೈತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಈ ವರ್ಷ ಕಂಡುಕೇಳರಿಯದ ಬರಗಾಲ ಸಂಪೂರ್ಣ ರಾಜ್ಯವನ್ನು ಬಾಧಿಸುತ್ತಿದೆ ಕೆಲ ಭಾಗದಲ್ಲಿ ಬಿತ್ತಿದ ಬೆಳೆ ಒಣಗುತ್ತಿದ್ದರೆ ಕೆಲ ಭಾಗದಲ್ಲಿ ಬಿತ್ತನೆಯೇ ಆಗಿಲ್ಲ ವರ್ಷಾಂತ್ಯಕ್ಕೆ ತಲುಪಿದ್ದೇವೆ ಬಿತ್ತನೆ ಮುಗಿಸಿರುವ ರೈತರ ಬೆಳೆಯ ನಿರೀಕ್ಷೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ ಕೃಷಿಕರ ಬದುಕು ಅಲ್ಲೋಲಕಲ್ಲೋಲವಾಗಿದೆ ಸರ್ಕಾರ ಮಾತ್ರ ರೈತರ, ಕೃಷಿ ಕಾರ್ಮಿಕರ ವರ್ಗಮಾನದ ಸಂಕಷ್ಟಗಳನ್ನು ನಿರ್ಲಕ್ಷಿಸಿ ತನ್ನ ಗ್ಯಾರಂಟಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ ವಿರೋಧ ಪಕ್ಷಗಳಿಗೂ ಸಹ ಮುಂದಿನ ಚುನಾವಣೆ ಸಿದ್ಧತೆಯಲ್ಲಿ ಮತ್ತು ಅಧಿಕಾರ ಹಿಡಿಯುವ ಹವಣಿಕೆಯಲ್ಲಿ ಮಗ್ನರಾಗಿದ್ದಾರೆ ಇಂತಹ ಸಂಕಷ್ಟದಲ್ಲಿ ನಾವೆಲ್ಲರೂ ದೈನಂದಿನ ಬದುಕಿಗಾಗಿ,ಕೃಷಿ ಕಾಯಕದ ಉಳಿವಿಗಾಗಿ,ಮಕ್ಕಳ ಬವಿಷ್ಯಕ್ಕಾಗಿ ಪರಿತಪಿಸುವಂತಾಗಿದೆ ಬ್ಯಾಂಕು ಮತ್ತು ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ರೈತರನ್ನು ಮತ್ತಷ್ಟು ಹೈರಾಣಾಗಿಸಿವೆ ಕೃಷಿ ಪಂಪ್ ಸೆಟ್ಟುಗಳನ್ನೇ ನಂಬಿರುವ ರೈತರಿಗೆ ಸರ್ಕಾರ ಘೋಷಿಸಿರುವ 7 ಗಂಟೆ ಸಮರ್ಪಕ ವಿದ್ಯುತ್ ಕೊಡದೆ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ ಬಹಳಷ್ಟು ಕೊಳವೆ ಬಾವಿಗಳಲ್ಲಿ ಈಗಾಗಲೇ ಮಳೆಗಾಲದಲ್ಲಿಯೇ ನೀರಿನ ಕೊರತೆ ಕಂಡು ಬರುತ್ತಿದೆ ಈಗಲೇ ಹೀಗಾದರೆ ಬೇಸಿಗೆಯಲ್ಲಿ ನಮ್ಮ ಗತಿ ಏನು?ಎಂಬ ಯಕ್ಷ ಪ್ರಶ್ನೆ ಹಳ್ಳಿಗಳಲ್ಲಿ ಕಾಡುತ್ತಿದೆ ಆದ್ದರಿಂದ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮೈಮರೆತ ಸರ್ಕಾರಗಳಿಗೆ ಛಾಟಿಯನ್ನು ಬೀಸಿ ಜಾಗೃತಿಗೊಳಿಸಲು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯದ ರೈತರಿಗೆ ಕರೆಕೊಟ್ಟಿದೆ.
-ಹಕ್ಕೊತ್ತಾಯಗಳು:-
1)ರಾಜ್ಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರು ತತ್ತರಿಸಿದ್ದಾರೆ ಆದ್ದರಿಂದ ರಾಜ್ಯಾದ್ಯಂತ ಬರಗಾಲವೆಂದು ಕೂಡಲೇ ಸರ್ಕಾರ ಘೋಷಿಸಬೇಕು.
2)ರೈತರಿಗೆ ಬೆಳೆ ಪರಿಹಾರಾರ್ಥವಾಗಿ ಎಕರೆಗೆ 25,000/-ರೂಪಾಯಿಗಳನ್ನು ಘೋಷಿಸಿ, ಜನ-ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.
-ಪ್ರಭಾಕರ ಹೊನ್ನಾಳಿ