ಕೊಪ್ಪಳ:ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 26 ಮತ್ತು ಸೆ. 27ರಂದು ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಕ್ರೀಡಾಕೂಟವನ್ನು ಸೆ.26ರ 10.30 ಗಂಟೆಗೆ ನಡೆಯುವ ಉದ್ಘಾಟನೆ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗುವುದು.ಕ್ರೀಡೆಗಳು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿವೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಪ್ರಥಮ,ದ್ವಿತೀಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ಮಾತ್ರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸೆ.26ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಿ,ತಮ್ಮ ಆಧಾರ ಕಾರ್ಡ,ತಾಲೂಕ ಮಟ್ಟದ ವಿಜೇತ ದಸರಾ ಪ್ರಶಸ್ತಿ ಪತ್ರ ಮತ್ತು ಇತ್ತೀಚಿನ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‌ಬುಕ್ ಝರಾಕ್ಷ ಪ್ರತಿಯೊಂದಿಗೆ ಕಡ್ಡಾಯವಾಗಿ ನೋಂದಣಿ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಸ್ಪರ್ಧೆಗಳ ವಿವರ: ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಅಥ್ಲೆಟಿಕ್ಸ್, ವಾಲಿಬಾಲ್,ಫುಟಬಾಲ್,ಖೋಖೋ,ಕಬಡ್ಡಿ, ಬಾಸ್ಕೆಟಬಾಲ್,ಕುಸ್ತಿ,ಬ್ಯಾಡ್ಮಿಂಟನ್,ಥ್ರೋಬಾಲ್, ಹ್ಯಾಂಡಬಾಲ್,ಹಾಕಿ,ಟೇಬಲ್ ಟೆನ್ನೀಸ್,ಬಾಲ್ ಬ್ಯಾಡ್ಮಿಂಟನ್,
ಆಯ್ಕೆ ಕ್ರೀಡೆಗಳು:ಟೆನ್ನೀಸ್,ನೆಟ್‌ಬಾಲ್ ಮತ್ತು ಈಜು ಸ್ಪರ್ಧೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ತಾಲೂಕು ಕೇಂದ್ರ ಸ್ಥಾನದಿಂದ ಹೋಗಿ ಬರುವ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ಬ್ಯಾಂಕ್‌ಖಾತೆ ಮೂಲಕ ಜಮಾ ಮಾಡಲಾಗುವುದು.ಕ್ರೀಡಾಪಟುಗಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಇರುತ್ತದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆಯ ದ್ವಿ.ದ.ಸ ಬಿ.ಕೀರ್ತಿವರ್ಧನ ಮೊ.ಸಂ: 7676343554,ಖೋಖೋ ತರಬೇತುದಾರರಾದ ಯತಿರಾಜು ಮೊ.ಸಂ: 9448633146, ವಾಲಿಬಾಲ್ ತರಬೇತುದಾರರಾದ ಸುರೇಶ ಯಾದವ ಮೊ.ಸಂ: 9901527333 ಗೆ ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ (ಗದಗ) ರಸ್ತೆ,ಕೊಪ್ಪಳ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.