ಯಾದಗಿರಿ:ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದ ಉದ್ಘಾಟಕರಾದ ಸೋಮಯ್ಯ ಹಿರೇಮಠ ಸಿ.ಆರ್.ಪಿ ಶಿರವಾಳ,ಅಧ್ಯಕ್ಷತೆ ವಹಿಸಿಕೊಂಡು ಮಲ್ಲಪ್ಪ ಮ್ಯಾಗೇರಿ ಎಸ್.ಡಿ.ಎಂ.ಸಿ ಅಧ್ಯಕ್ಷರು,ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರೆಪ್ಪ ಪ್ಯಾಟಿ ಎಸ್.ಟಿ ಸಂಘದ ಜಿಲ್ಲಾಧ್ಯಕ್ಷರು, ಸಾಯಬಣ್ಣ ಸಿರನೆತ್ತಿ ತಾಲೂಕ ಪಂಚಾಯತಿ ಸದಸ್ಯರು ಶಹಾಪುರ ವರ್ಗಾವಣೆಗೊಂಡ ಶಿಕ್ಷಕರು ಎಸ್.ಎಂ.ನದಾಫ್ ಮುಖ್ಯ ಗುರುಗಳು ಹಾಗೂ ಶ್ರೀಮತಿ ಸಾವಿತ್ರಿ ಸಹಾಯಕ ಶಿಕ್ಷಕಿ ಇವರಿಗೆ ಎಲ್ಲಾ ಶಿಕ್ಷಕರ ವೃಂದ ಮತ್ತು ಊರಿನ ಗ್ರಾಮಸ್ಥರು ಸೇರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡಲಾಯಿತು.
ಎಸ್.ಎಂ.ನದಾಫ್ ಮುಖ್ಯ ಗುರುಗಳು ಮಾತನಾಡುತ್ತಾ ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸುಲು ಕಾರಣೀಕರ್ತರಾದ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಣ ಅಧಿಕಾರಿಗಳು ಹಾಗೂ ಮುದ್ದು ಮಕ್ಕಳು ಶಿರವಾಳ ಗ್ರಾಮದ ಗ್ರಾಮಸ್ಥರು ಮತ್ತು ಪಾಲಕರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಮಕ್ಕಳು ದೇವರ ಸಮಾನ ಆ ದೇವರುಗಳಿಗೆ ನಮ್ಮಗೆ ಗೌರವ ಕೊಡುವುದನ್ನು ನೋಡಿ ಇಂತಹ ಗೌರವ ಯಾವ ಇಲಾಖೆಯಲ್ಲಿ ಸಿಗುವುದಿಲ್ಲ ಆದರೆ ನಮ್ಮ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ನೀಡುವ ಗೌರವ ಬೇರೆ ಯಾರಿಗೂ ಇಲ್ಲ ಅದಕ್ಕೆ ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು. ಶ್ರೀಮತಿ ಸಾವಿತ್ರಿ ಸ.ಶಿ ಮಾತನಾಡುತ್ತಾ ನಮ್ಮ 16 ವರ್ಷದ ಸೇವೆಯಲ್ಲಿ ಆದ ಕಹಿ ಮತ್ತು ಸಿಹಿ ಘಟನೆಗಳ ಬಗ್ಗೆ ಶಿಕ್ಷಕರು ಹಾಗೂ ಮಕ್ಕಳ ಸಂಬಂಧ ಪವಿತ್ರವಾದದ್ದು ಈಗ ನನಗೆ ವರ್ಗಾವಣೆಯಾಗಿರುವುದರಿಂದ ತುಂಬಾ ನೋವು ದುಃಖವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆಯೋಜಕರಾದ ಬಸಲಿಂಗಪ್ಪ ಕೋಳಿ ಭೀ.ಆ.ತಾಲೂಕ ಅಧ್ಯಕ್ಷರು,ಚಂದಪ್ಪ ಮು.ಗು.ಎಚ್.ಪಿ.ಎಸ್.ಮಡ್ನಾಳ ಶಿಕ್ಷಕರ ಸಂಘದ ಖಜಾಂಚಿ,ಭೀಮಣ್ಣ ಸ.ಶಿ.ಜಿ.ಎಚ್.ಎಸ್ ದೋರನಹಳ್ಳಿ,ಎಂ.ಬಿ.ಪಾಟೀಲ್ ಎಚ್.ಎಂ.ಜಿ.ಎಚ್.ಪಿ.ಎಸ್ ಹುರಸಗುಂಡಗಿ, ಕುಮಾರಿ ಜುಬೇದಾಬೇಗಂ ಸ.ಶಿ,ಶಿರವಾಳ ಗ್ರಾಮದ ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಹಾಗೂ ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಗ್ರಾಮಸ್ಥರು ಶಾಲೆ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.