ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ವಿರೇಶ ಕವಲ್ದಾರ್ ಕಡಕೋಳ ಹಾಗೂ ಉಪಾಧ್ಯಕ್ಷರಾದ ದೆವೇಂದ್ರ ನಾಯ್ಕೊಡಿ ಯವರು ರೈತರ ಕಷ್ಟ,ನೋವು-ನಲಿವುಗಳನ್ನು ಆಲಿಸಿ ಹಲವಾರು ರೈತರ ತೊಂದರೆಗಳನ್ನು ತಮ್ಮ ಮನವಿ ಮುಖಾಂತರ ಯಡ್ರಾಮಿತಸಿಲ್ದಾರ್ ಅವರಿಗೆ ಮನವಿ ಪತ್ರ ಕೊಟ್ಟಿದ್ದಾರೆ.ಈ ಒಂದು ಸತ್ಯಾಗ್ರಹದಲ್ಲಿ ರೈತರ ಬೇಡಿಗೆಗಳನ್ನು ಮನವಿ ಪತ್ರದಲ್ಲಿ ಈ ಕೆಳಗಿನ ಅಂಶಗಳನ್ನು ತಹಶಿಲ್ದಾರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರದ ಮೂಲಕ ಸರ್ಕಾರದ ಗಮನಕ್ಕೆ ತರಲು ರೈತ ಹೋರಾಟಗಾರ ವಿರೇಶ ಕವಲ್ದಾರ್ ಈ ಕೆಳಗಿನ ಅಂಶಗಳನ್ನು ಮನವಿ ಪತ್ರದಲ್ಲಿ ಸಲ್ಲಿಸಿದರು
ರಾಜ್ಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರು ತತ್ತರಿಸಿದ್ದಾರೆ ಆದ್ದರಿಂದ ರಾಜ್ಯದ್ಯಂತ ಬರಗಾಲ ಘೋಷಣೆಯನ್ನು ಕೂಡಲೆ ಸರ್ಕಾರ ಘೋಷಿಸಬೇಕು,ರೈತರ ಬೆಳೆ ಪರಿಹಾರ ಆರ್ಥಿಕವಾಗಿ ಎಕರೆಗೆ 25000 ರೂ ಗಳನ್ನು ಘೋಷಿಸಿ,ಜನ-ಜನಾವಾರಗಳಿಗೆ ಅಗತ್ಯ ಸೌಲಭ್ಯಗಳನ್ನು ಕೊಡಬೇಕು,ನೀರಾವರಿ ಪಂಪಶೆಟ್ ಹಗಲಿನಲ್ಲಿ ತಡೆಯರಹಿತ ಗುಣಮಟ್ಟದ ಏಳು ಗಂಟೆಗಳ ಕಾಲ ಪೂರೈಸಬೇಕು,ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಮತ್ತು ಸುಟ್ಟುಹೋದ ಟಿ.ಸಿ ಯನ್ನು ಬದಲಿಸಿ ತಕ್ಷಣವೇ ಹೊಸ ಟಿ.ಸಿಯನ್ನು ಹಾಕಿ ಕೊಡಬೇಕು, ರೈತರ ಬ್ಯಾಂಕ್,ಸಹಕಾರಿ ಬ್ಯಾಂಕ್,ಕೃಷಿ ಭೂ ಅಭಿವೃದ್ಧಿ ಬ್ಯಾಂಕ್,ಖಾಸಗಿ ಫೈನಾನ್ಸ್,ರೈತರ ಸಾಲಾ ಮನ್ನಾ ಮಾಡಬೇಕು,
ಹೀಗೆ ಹತ್ತು ಹಲವಾರು ರೈತರ ಬೇಡಿಕೆಯನ್ನು ತಮ್ಮ ಬೇಡಿಕೆಗಳನ್ನ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು ಈ ಸತ್ಯಾಗ್ರಹ ಹಾಗೂ ಮನವಿ ಪತ್ರ ಕೊಡಲು ತಾಲೂಕು ರೈತ ಹಾಗೂ ಹಸಿರು ಸೇನೆಯ ಅಧ್ಯಕ್ಷರಾದ ವಿರೇಶ ಕವಲ್ದಾರ್ ಕಡಕೋಳ ಹಾಗೂ ಉಪಾಧ್ಯಕ್ಷರಾದ ದೆವೇಂದ್ರ ನಾಯ್ಕೋಡಿ ಹಾಗೂ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಗುರು ಹಿರಿಯರು ಭಾಗವಹಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.