ರಾಯಚೂರ ಜಿಲ್ಲೆಯ ಮುದಗಲ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ವತಿಯಿಂದ ಆಯುಷ್ಮಾನ್ ಭವ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಟ್ಟದಲ್ಲಿ ಸಾಪ್ತಾಹಿಕ ಆರೋಗ್ಯ ಮೇಳ ಹಮ್ಮಿಕೊಂಡಿದ್ದು ಮುದಗಲ್ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾದಿಕಾರಿ ಡಾ|| ಅನಂತಕುಮಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆ.ಬಾ ಕಾರ್ಡ್ ಕುರಿತು ಮಾತನಾಡಿ
ಕಾರ್ಡ್ ನ ಉಪಯೋಗಗಳ ಬಗ್ಗೆ ಕೂಡಾ ಮಾಹಿತಿ ನೀಡಿದರು.
1) ಹೊರರೋಗಿಗಳಿಗೆ ಉಚಿತ ಔಷಧಿಗಳು ಮತ್ತು ರೋಗ ನಿರ್ಣಾಯಕ ಸೇವೆಗಳು
2) ದೂರವಾಣಿ ಮೂಲಕ ಸಮಾಲೋಚನೆ
3) ಅಯುಷ್ಮಾನ್ ಕಾರ್ಡ್ ವಿತರಣೆ
4) ಕ್ಷೆಯ ಮತ್ತು ಸಾಂಕ್ರಾಮಿಕ ರೋಗಗಳ ತಪಾಸಣೆ
4) ಅಯುಷ್ಮಾನ್ ಭಾರತ್ ಐಡಿ ರಚನೆ
ಹೀಗೆ ಹಲವು ಆಯುಷ್ಮಾನ್ ಕಾರ್ಡಿನ ಉಪಯೋಗಗಳ ಕುರಿತು ಮಾಹಿತಿ ನೀಡಿದರು ಕಾರ್ಯಕ್ರಮದ ಅತಿಥಿಗಳಾಗಿ ಪುರಸಭೆಯ ಮುಖ್ಯಧಿಕಾರಿಗಳಾದ ನಬಿಸಾಬ ಕಂದಗಲ್,ಆಯುಷ್ ವೈದ್ಯಾದಿಕಾರಿಗಳಾದ ಡಾ|| ವಿನೋದ ಕುಮಾರ,ಮುದಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ ಮೂಡಿಗೇರಿ,ಮುದಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಮಾಹಂತಯ್ಯ ಸ್ವಾಮಿ,ನವೋದಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು & ಮಕ್ಕಳತಜ್ಞರು ಡಾ||ಮಲ್ಲೇಶಪ್ಪ,ನವೋದಯ ಮೆಡಿಕಲ್ ಕಾಲೇಜಿನ ಜನರಲ್ ಸರ್ಜನ್ ಡಾ||ಅಭಿಲಾಶ,ನವೋದಯ ಮೆಡಿಕಲ್ ಕಾಲೇಜಿನ ಚರ್ಮರೋಗ ತಜ್ಞರು ಡಾ|| ಶೃತಿ, ಅನೇಕ ಅತಿಥಿಗಳು ಭಾಗಿಯಾಗಿದ್ದರು
ವರದಿ-ಶಂಕರ್ ರಾಠೋಡ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.