ಬೀದರ್/ಭಾಲ್ಕಿ:ಭಾತಂಬ್ರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋರಚಿಂಚೋಳಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು,ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಮನೋಹರ ಹೊಲ್ಕರ್ ಅವರು ಭಾಗವಹಿಸಿದ್ದರು,b,r,p ಗಳಾದ ಸಂತೋಷ್ ಮುದಾಳೆ ಅವರು ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಒಂದು ಒಳ್ಳೆಯ ವೇದಿಕೆ ಎಂದು ಹೇಳಿದರು,
ಮತ್ತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಶುಭಾಷ್ ಬಾವಗೆ ಮತ್ತು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗು ಖ್ಯಾತ ವಾಗ್ಮಿಗಳು ಆದ ವೀರಣ್ಣ ಕಾರಬಾರಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು/ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷಕುಮಾರಿವಾಡೆ ಅವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಶಾಲಾ ಮುಖ್ಯ ಗುರುಗಳು ಪ್ರಸ್ತಾವಿಕ ಮಾತುಗಳನ್ನು ಆಡಿದರು ಹಾಗೂ ಶಿಕ್ಷಕರಾದ ಉತ್ತಮ ಶಿಂದೆ ಅವರು ಕಾರ್ಯಕ್ರಮ ವನ್ನು ನಿರೂಪಣೆ ಮಾಡಿದರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ದಿಗಂಬರ ಹಾಸನಾಳೆ,ಪ್ರದೀಪ್ ಗುಪ್ತ, ಮತ್ತು ಹಮೀದ್ ಹಾಗು ದೇವಿದಾಸ ದಪಡೆ ಅವರು ಇದ್ದರು ಹಾಗು ಶಾಲಾ sdmc ಅಧ್ಯಕ್ಷರು ಆದ ನವನಾಥ ಮೋಲ್ಕೆರೆ ಮತ್ತು ಸದಸ್ಯರು ಇದ್ದರು, ಅದೇ ರೀತಿ ಶಿಕ್ಷಕರಾದ ನಿರಂಜಪ್ಪ ಪಾತ್ರೆ, ಬಾಲಾಜಿ ಬೈರಾಗಿ, ಬಸವರಾಜ ಮಡಿವಾಳ, ಅಶೋಕ ತಂಬೊಳೆ, ರತ್ನಾದೀಪ ಹುಲ್ಸುರೆ, ಅರವಿಂದ ಪಾಟೀಲ್, ವೈಜೀನಾಥ್ ಪಾಟೀಲ್, ಅಶೋಕ್ ಬಿರಾದಾರ್, ಸತ್ಯವಾನ್ ಕಾಂಬಳೆ, ಸುಧಾಕರ ಗಾಯಕವಾಡ್,ಸಂತೋಷಕುಮಾರ್ ವಾಡೆ,ರಾಮರಾವ್ ಬಾನ, brp ಗಳಾದ ಆನಂದ ಅವರು ಇದ್ದರು,ಮತ್ತು ಭಾತಂಬ್ರಾ ಕ್ಲಸ್ಟರ್ ನ ಎಲ್ಲಾ ಶಾಲೆಯ ಮುಖ್ಯಗುರುಗಳು ಶಿಕ್ಷಕರು, ಹಾಗು ವಿವಿಧ ಶಾಲೆಗಳಿಂದ ಬಂದಿದ್ದ ತೀರ್ಪುಗಾರರು ಹಾಗು ಭಾಗವಹಿಸಿದ್ದರು, ಮತ್ತು ಗೋರಚಿಂಚೋಳಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ವರದಿ -ಮಹಾನ್ ಕೋಟೆ
