ಹನೂರು:ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು .
ನಂತರ ಮಾತನಾಡಿದ ಅವರು ಮುಂದಿನ ಐದು ವರ್ಷದಲ್ಲಿ ಮಹದೇಶ್ವರ ಕ್ಷೇತ್ರವನ್ನು ಸಂಪೂರ್ಣ ವಾಗಿ ಅಭಿವೃದ್ಧಿ ಮಾಡುತ್ತೇವೆ,ಇಂತಹ ಸ್ಥಳದಲ್ಲಿ ಮಾಡಿಕೊಳ್ಳುವ ಮದುವೆ ಬಹಳ ಉತ್ತಮವಾಗಿರುತ್ತದೆ ಬಡ ಜನರು ದುಬಾರಿ ಮದುವೆಯನ್ನು ಮಾಡಿಕೊಳ್ಳಬೇಡಿ ತಮ್ಮ ಶಕ್ತಿಗೆ ತಕ್ಕಂತೆ ಮದುವೆ ಮಾಡಿಕೊಳ್ಳಿ ಮುಂದಿನ ಯುವ ಪೀಳಿಗೆಗೆ ಸರಳ ಮದುವೆ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಮದುವೆಗೆ ದುಂದು ವೆಚ್ಚವನ್ನು ಮಾಡಬಾರದು,ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆಯನ್ನು ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಯಾತ್ರಿಕರಿಗೆ ಶುದ್ದ ಕುಡಿಯುವ ನೀರು ಸ್ನಾನ ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.
ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ಹನೂರು ಕ್ಷೇತ್ರ ಭೌಗೋಳಿಕವಾಗಿ ದೊಡ್ಡದಾಗಿದ್ದು ಮೂಲಭೂತ ಸೌಕರ್ಯಗಳಾದ ವಿದ್ಯುತ್,ರಸ್ತೆ, ಇನ್ನಿತರ ಸೌಕರ್ಯಗಳನ್ನು ನೀಡಬೇಕು,ಕಳೆದ ಬಾರಿ ನೀವೆ ಮುಖ್ಯಮಂತ್ರಿಗಳಾದಾಗ ಹನೂರು ತಾಲ್ಲೂಕು ಎಂದು ಘೋಷಣೆ ಮಾಡಿದ್ದೀರಿ ಆದರೆ ಯಾವುದೇ ತಾಲೂಕು ಮಟ್ಟದ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಮತ್ತೆ ನೀವೆ ಮುಖ್ಯಮಂತ್ರಿಗಳಾಗಿದ್ದಿರ ದಯಮಾಡಿ ತಾಲ್ಲೂಕಿನಲ್ಲಿ ಆಡಳಿತ ಸೌಧ,100 ಬೆಡ್ ನ ಆಸ್ಪತ್ರೆಗೆ ಅನುದಾನವನ್ನು ನೀಡಬೇಕು ಹಾಗೂ ಮಲೆ ಮಹದೇಶ್ವರ ಕ್ಷೇತ್ರದ ಸುತ್ತಮುತ್ತಲಿನ ಸೋಲಿಗ ಮತ್ತು ಬೆಡಗಂಪಣ ಜನಾಂಗದವರಿಗೆ ವಿಶೇಷ ಅನುದಾನವನ್ನು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ರವರು ಮಾತನಾಡಿ ನೂತನವಾಗಿ ಮದುವೆಯಾದ ವಧು ವರರಿಗೆ ಆಶೀರ್ವದಿಸುತ್ತಾ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅನೇಕ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ ಹಾಗೂ ನುಡಿದಂತೆ ನಡೆಯುವವರಲ್ಲಿ ಕೆಲವರು ಮಾತ್ರ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಿದ್ದಾರೆ ಎಂದರು,ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಎದುರಾಗಿದ್ದು ಮಾದಪ್ಪನ ಕೃಪೆಯಿಂದ ಬೇಗ ಬಗೆ ಹರಿಯಲಿ ಎಂದು ಆಶೀರ್ವದಿಸಿದರು.ಇದೇ ಸಂದರ್ಭದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿರವರು ಸಾರಿಗೆ ಮತ್ತು ಮುಜರಾಯಿ ಸಚಿವರು ರಾಮಲಿಂಗಾರೆಡ್ಡಿ ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಡಾ.ಹೆಚ್,ಸಿ ಮಹದೇವಪ್ಪ,ಮಾಜಿ ಶಾಸಕರಾದ ಅರ್ ನರೇಂದ್ರ,ಶಾಸಕರುಗಳಾದ ಕೊಳ್ಳೇಗಾಲ ಎ ಆರ್ ಕೃಷ್ಣಮೂರ್ತಿ,ಮರಿ ತಿಬ್ಬೆಗೌಡ,ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪುಟ್ಟರಂಗಶೆಟ್ಟಿ,ಗುಂಡ್ಲುಪೇಟೆ,ಹೆಚ್ ಎಂ ಗಣೇಶ್ ಪ್ರಸಾದ್ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷರು ಅರ್ಚನಾ,ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿರವರು ಜಿಲ್ಲಾಧಿಕಾರಿಗಳಾದ ಶಿಲ್ಪನಾಗ್ ರವರು,ಚಾಮರಾಜನಗರ ಪೊಲೀಸ್ ಅಧೀಕ್ಷಕರು ಶ್ರೀಮತಿ ಪದ್ಮನಿ ಸಾಹು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.