ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಶ್ರೀ ಮತಿ ನಿರಂಜಿನಿ, ಹೆಚ್ ಇವರಿಂದ ಪಟ್ಟಣದ ನಾಗರೀಕರಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನವಿ
ಹೀಗಾಗಲೇ ಡೆಂಗ್ಯೂ,ಚಿಕನ್ ಗುನ್ಯಾ,ಕಾಯಿಲೆ ಹರಡುತ್ತಿದ್ದು ನಮ್ಮ ಪಟ್ಟಣದಲ್ಲಿ ಈ ಕಾಯಿಲೆಯು ಇದೆ ಎಂಬ ಮಾಹಿತಿ ಅರೋಗ್ಯ ಇಲಾಖೆಯಿಂದ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ಪುರಸಭೆ ವತಿಯಿಂದ ಕಾಲುವೆ ಚರಂಡಿ ಸ್ವಚ್ಛತೆ ಬಗ್ಗೆ ಪೌರ ಕಾರ್ಮಿಕರು ಗಮನ ಹರಿಸಿ ಕೆಲಸ ಮಾಡುತ್ತಾರೆ
ಅದರೆ ಖಾಸಗಿ ವ್ಯಕ್ತಿಗಳ ಖಾಲಿ ನಿವೇಶನದಲ್ಲಿ ಬೆಳೆ ದಿರುವ ಗಿಡಗಳನ್ನು ಸ್ವಚ್ಚತೆ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅದರಿಂದ ತಮ್ಮ ತಮ್ಮ ನಿವೇಶನದಲ್ಲಿ ಬೆಳೆದಿರುವ ಗಿಡ ಕಸವನ್ನು ಸ್ವಚ್ಚತೆ ಮಾಡಬೇಕು ಇಲ್ಲವಾದರೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಪಾನಿಪುರಿ ಅಂಗಡಿ ತರಕಾರಿ ಮಾರುವವರು ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಇಲ್ಲವಾದರೆ ನೋಟಿಸ್ ನೀಡುತ್ತೇವೆ ಎಂದು ತಿಳಿಸಿದರು.
ವರದಿ ಪ್ರಭಾಕರ ಡಿ ಎಂ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.