ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಇಂದು ಹೊನ್ನಾಳಿ ತಾಲೂಕು ರೈತರ ಅಹವಾಲುಗಳ ಸಭೆಯನ್ನು
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮತ್ತು ತಾಲೂಕು ದಂಡಾಧಿಕಾರಿ ಪುಟ್ಟ ರಾಜಗೌಡ ಇವರ ಸಹಯೋಗದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಚರ್ಚೆ ಮಾಡಿ ಸಮಸ್ಯೆಗಳನ್ನು
ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು
ಕೆರೆಗಳ ಒತ್ತುವರಿ ತೆರವು ನಕಾಶೆ ಕಂಡ ದಾರಿ ಸ್ಮಶಾನ ಭೂಮಿ ಮತ್ತು ಗೋಮಾಳ ರಕ್ಷಣೆಗೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು
ವಿದ್ಯುತ್ ಇಲಾಖೆ ರೈತರಿಗೆ ಏಳು ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ರೈತರು ಆಗ್ರಹಿಸಿದರು.ಟಿ ಸಿ ಸುಟ್ಟರೆ ರೈತರಿಂದ ಹಣ ಪಡೆದು ಟಿ ಸಿ ನೀಡುತ್ತಾರೆ ಎಂದು ರೈತರು ಆರೋಪಿಸಿದರು.
ಸರ್ವೆ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು
ಬೆಳೆ ವಿಮೆ ಕಟ್ಟಿದರೂ ರೈತರ ಸಹಾಯಕ್ಕೆಇಲ್ಲ ಫಸಲ್ ಭೀಮಾ ಯೋಜನೆ ಶೀಘ್ರವೇ ಬಿಡುಗಡೆ ಮಾಡಿಸಬೇಕು ಎಂದು ರೈತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘ ಗಣೇಶ ಕುರುವ ಉಮೇಶ್ ಬಸವರಾಜ ಪ್ಪ ಕರಿಬಸಪ್ಪ
ಕುಳಗಟ್ಟೆ,ಚನ್ನಬಸಪ್ಪ
ತಾಲೂಕಿನ ರೈತರು ತಮ್ಮ ಸಮಸ್ಯೆ ಗಳನ್ನು ಅಧಿಕಾರಿಗಳು ಕಾಲ ಹರಣ ಮಾಡದೇ ಬೇಗ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
-ಪ್ರಭಾಕರ ಡಿ ಎಂ ಹೊನ್ನಾಳಿ
