ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಜಿಲ್ಲಾ ಸಾಮಾಜಿಕ ಅರಣ್ಯ ವಲಯ ರಾಯಚೂರು ಅಧಿಕಾರಿಗಳಾದ ಶ್ರೀ ಎಸ್.ಸುರೇಶಬಾಬು ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಎಸ್.ಸುರೇಶಬಾಬು ಮಾತನಾಡಿ ಭೂಮಿಯ ಮೇಲಿನ ಯಾವುದೇ ಜೀವಿಗಳ ಅಸ್ತಿತ್ವಕ್ಕೆ ಪರಿಸರವು ಪ್ರಮುಖವಾಗಿದೆ. ಆದಾಗ್ಯೂ,ಜಾಗತಿಕ ತಾಪಮಾನ ಏರಿಕೆ,ಮಾಲಿನ್ಯ ಮತ್ತು ಹೆಚ್ಚುತ್ತಿರುವ ಕೈಗಾರಿಕೆಗಳಂತಹ ಅಂಶಗಳು ಪರಿಸರ ಬದಲಾವಣೆಗಳನ್ನು ತಂದಿವೆ.ಪರಿಸರವನ್ನು ಸಂರಕ್ಷಿಸುವ ಅವಶ್ಯಕತೆಯಿದೆ.ಇಂತಹ ಪರಿಸರವನ್ನು ಉಳಿಸುವಲ್ಲಿ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ,ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು.ಪರಿಸರ ಸಂರಕ್ಷಣೆ ಹಾಗೂ ಪೋಷಣೆಯಲ್ಲಿ ವನಸಿರಿ ಫೌಂಡೇಶನ್ ತೊಡಗಿರುವುದು ಶ್ಲಾಘನೀಯ.ನಮ್ಮ ಇಲಾಖೆಯಿಂದ ಯಾವುದೇ ರೀತಿಯ ಪರಿಸರ ಸಂರಕ್ಷಣೆಗೆ ಸಹಾಯ ಸಹಕಾರ ಬೇಕಾದರೆ ನಮ್ಮ ಇಲಾಖೆಯ ವತಿಯಿಂದ ಸಂಪೂರ್ಣವಾಗಿ ನೀಡುತ್ತೇವೆ ಎಂದರು.ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಯಚೂರು ACF ಸಾಮಾಜಿಕ ಅರಣ್ಯ ವಲಯ ಮಾಜಿ ಅಧಿಕಾರಿಗಳಾದ ಬೀರಪ್ಪ,ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ,ಆದನಗೌಡ ಪೂಲಬಾವಿ,ರಂಜಾನ್ ಸಾಬ್,ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ ಇನ್ನಿತರರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.