ಶಹಾಪುರ:ನಗರದ ಶ್ರೀ ಫಕೀರೇಶ್ವರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶಹಾಪೂರ ವಿಕಾಸ ಅಕಾಡೆಮಿ ಹಿತೈಷಿಗಳ ಸಭೆಯಲ್ಲಿ ಮಾತನಾಡಿ ಬಸವರಾಜ ಪಾಟೀಲ್ ಸೇಡಂ ಸಮಗ್ರ ವಿಕಾಸದ ದೃಷ್ಟಿಯಲ್ಲಿ ಇರಿಸಿ ಕೊಂಡು ಕಲ್ಯಾಣ ಕರ್ನಾಟಕ ಭಾಗವನ್ನು ವಿಕಾಸ ಪ್ರಯೋಗ ಭೂಮಿಯನ್ನಾಗಿಸಲು ಕಳೆದ 20 ವರ್ಷಗಳಿಂದ ಸೇಡಂನಲ್ಲಿ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಭಾರತ ವಿಕಾಸ ಸಂಗಮ ವಿಕಾಸ ಅಕಾಡೆಮಿ ಸಂಯೋಜನೆಯಲ್ಲಿ ಬರುವ 2025 ರಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಸರ್ವರ ಸಹಕಾರದೊಂದಿಗೆ ಆಯೋಜಿಸಲು ಈಗಿನಿಂದಲೇ ಪೂರ್ವ ಸಿದ್ಧತೆ ಕಾರ್ಯ ನಡೆದಿದೆ ಎಂದು ಕಾರ್ಯಕ್ರಮ ಕೇಂದ್ರ ಬಿಂದು ಸಂಯೋಜಕ ಶ್ರೀ ಬಸವರಾಜ ಪಾಟೀಲ್ ಸೇಡಂ ಸಂಪೂರ್ಣ ಮಾಹಿತಿ ನೀಡಿದರು.
ಶ್ರೀ ಫಕಿರೇಶ್ವರ ಮಠದ ಪರಮ ಪೂಜ್ಯರಾದ ಗುರಪಾದ ಸ್ವಾಮಿಗಳು ಭಾರತ ವಿಕಾಸ ಸಂಗಮ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಅವರ ಸೇವೆ ನಿಶ್ಚಿತಾರ್ಥ ಸೇವೆ ಎಂದು ಸ್ವಾಮೀಜಿ ಹೇಳಿದರು.ಪ್ರಮುಖರಾದ ಭೀಮರೆಡ್ಡಿ ಬೈರಡ್ಡಿ, ನೀಲಕಂಠರಾಯ ಎಲ್ಹೇರಿ,ಶ್ರೀಮತಿ ಜ್ಯೋತಿ ಲತಾ ತಡಬಿಡಿ,ಹಿರಿಯ ಪತ್ರಕರ್ತರಾದ ನಾರಾಯಣ ಆಚಾರ್ಯ ಸಂಯುಕ್ತ ಕರ್ನಾಟಕ ವರದಿಗಾರರು, ಬೈರಡ್ಡಿ ಗೋಗಿ,ಸೇರಿದಂತೆ ಅನೇಕ ಪ್ರಮುಖರು ಸಂಘ ಸಂಸ್ಥೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.