ರಾಯಚೂರು/ಮಸ್ಕಿ-ರಾಜ್ಯ ಸರ್ಕಾರವು ತಮಿಳುನಾಡಿಗೆ ಕರ್ನಾಟಕದ ಕಾವೇರಿ ನದಿ ನೀರನ್ನು ಹರಿಸುವುದನ್ನು ತಡೆಯಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿಗಳು,ಶಾಸಕರು,ಸಂಸದರು ಕೇಂದ್ರ ಸರ್ಕಾರಕ್ಕೆ ರಾಜ್ಯದ ನೀರಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ತಡೆಯಬೇಕೆಂದು ಮಸ್ಕಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನ್ಯ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಅಶೋಕ ಮುರಾರಿ (ಕ.ರ.ವೇ -ಪ್ರವೀಣಶೆಟ್ಟಿ ಬಣ),ಆರ್,ಕೆ.ನಾಯಕ (ಕ.ರ.ವೇ -ಶಿವರಾಮೇಗೌಡ ಬಣ),ಕಿರಣ ಮುರಾರಿ(ಜಯ ಕರ್ನಾಟಕ),ವಿಜಯಕುಮಾರ ಬಡಿಗೇರ (ಕರ್ನಾಟಕ ರಾಜ್ಯ ರೈತ ಸಂಘ),ಬಸವರಾಜ ಉದ್ದಾಳ (ನಮ್ಮ ಕ.ರ.ವೇ ಯುವಸೇನೆ),ಮಲ್ಲಿಕ್ ಕೋಠಾರಿ (ಕನ್ನಡ ಸೇನೆ ಕರ್ನಾಟಕ),ದುರುಗಪ್ಪ ಕೆ (ಕ.ರ.ವೇ -ಸ್ವಾಭಿಮಾನಿ ಬಣ),ರಾಘವೇಂದ್ರ (ಕರುನಾಡ ವಿಜಯ ಸೇನೆ),ಸಂತೋಷ್ ದಿನ್ನಿ (ಕೆ.ಆರ್.ಎಸ್), ದೇವರಾಜ್ ಮಡಿವಾಳ (ಎ.ಐ.ಸಿ.ಸಿ.ಟಿ. ಯು),ಸಂಘಟನೆ ಸರ್ವ ಪದಾಧಿಕಾರಿಗಳು ಹಾಜರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.