ಉತ್ತರ ಕನ್ನಡ/ಮುಂಡಗೋಡ:ನಗರದ ದೈವಜ್ಞ ಕಲ್ಯಾಣ ಮಂಟಪ ಎದುರಿಗಿನ ಕಡಲಿಕಟ್ಟೆ ಕೆರೆ ಸುಮಾರು 7.20 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದ್ದು,ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಕೆರೆಯ ಅಂಚಿನ ಭಾಗದಿಂದ 30 ಮೀಟರ್ ಬಫರ್ ಝೋನ್ ವ್ಯಾಪ್ತಿಯಲ್ಲಿರುತ್ತದೆ,ಆದರೆ ಕಡಲಿಕಟ್ಟೆ ಕೆರೆ ಅತಿಕ್ರಮಣ ದಾರರಿಂದ ಒತ್ತುವರಿ ಆಗಿದ್ದು ಹಾಗೂ ಕೆರೆಯ ಬಫರ್ ಝೋನ್ ನಲ್ಲಿ ಅಕ್ರಮವಾಗಿ ಕಟ್ಟಡ ಗಳನ್ನು ಕಟ್ಟಲಾಗಿದ್ದು, ಪಟ್ಟಣ ಪಂಚಾಯ್ತಿ ಮುಂಡಗೋಡ ಅಧಿಕಾರಿಗಳ ಗಮನಕ್ಕೆ ತಂದರು ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಸದರಿ ವಿಷಯವನ್ನು ತಹಶೀಲ್ದಾರ್ ಗಮನಕ್ಕೆ ತಂದಾಗ ತಹಶೀಲ್ದಾರ್ ಅವರು ಭೂ ಮಾಪಕ ರ ಸಹಾಯದೊಂದಿಗೆ ಗಡಿ ಗುರುತಿಸಿ ಕ್ರಮ ಕೈಗೊಳ್ಳಲು ಆದೇಶ ಮಾಡಿ 7 ತಿಂಗಳು ಕಳೆದರೂ ಇದುವರೆಗೂ ಪಟ್ಟಣ ಪಂಚಾಯ್ತಿ ಮುಂಡಗೋಡ ಅವರಿಂದ ಯಾವುದೇ ರೀತಿಯ ಕ್ರಮ ಆಗದಿರುವುದು,ಜನಸಾಮಾನ್ಯರಲ್ಲಿ ತಹಶೀಲ್ದಾರ್ ಆದೇಶಕ್ಕೆ ಯಾವುದೇ ರೀತಿಯ ಬೆಲೆ ಇಲ್ಲವಲ್ಲ ಎಂಬ ಪ್ರಶ್ನೆ ಮೂಡುತ್ತಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.