ಶಹಾಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡಪರ ಒಕ್ಕೂಟ ವತಿಯಿಂದ ಕಾವೇರಿ ಜಲಾಶಯ ಬತ್ತಿರುವ ಕರ್ನಾಟಕ ಜಲವಾಸ್ತವವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುತ್ತಿರುವ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರವು ಪ್ರತಿ ದಿನ 5000 ಸಾವಿರ ಕ್ಯೂಸೆಕ್ ನೀರು ಬಿಡತ್ತಿರುವುದರಿಂದ ರಾಜ್ಯದ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಕಾವೇರಿ ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರದ ಕೃಷಿ ಜಲ ತಜ್ಞರಿದ್ದು ಅವರಿಗೆ ವಾಸ್ತವ ಪರಿಸ್ಥಿತಿಗಳ ಅರಿವಿದ್ದರೂ ನೀರು ಹಂಚಿಕೆ ಸಂಬಂಧ ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿರುವುದಿಲ್ಲ ಹೀಗಾಗಿ ನೀರಿನ ಪ್ರಮಾಣ ಇಳಿಸಬೇಕೆಂಬ ತಮಿಳುನಾಡಿನ ದುರಹಂಕಾರ ವಾದವನ್ನು ನಾವು ಕನ್ನಡಿಗರು ಒಪ್ಪುವುದಿಲ್ಲ ನೀರು ಹಂಚಿಕೆ ಕುರಿತು ಗಣಿತ ಲೆಕ್ಕಗಳನ್ನು ಹೇಳುವ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ.ಸುಪ್ರೀಂಕೋರ್ಟ್ ತೀರ್ಪು ತಿಳಿಸಿರುವ ಪ್ರಯುಕ್ತ ನೀರು ಹಂಚಿಕೆ ಪ್ರಮಾಣ ತಗ್ಗಿಸಬೇಕೆಂಬ ತಮಿಳುನಾಡಿನ ಮೊಂಡು ವಾದದ ಅಂಶಗಳನ್ನು ಅಧ್ಯತಗೆ ತೆಗೆದುಕೊಳ್ಳದ ನ್ಯಾಯಪೀಠವು ಕರ್ನಾಟಕಕ್ಕೆ ಅನ್ಯಾಯವೆಸಗಿರುತ್ತದೆ ಏಕೆಂದರೆ ರಾಜ್ಯದಲ್ಲಿ ಈಗಾಗಲೇ ಬರಗಾಲ ಪರಿಸ್ಥಿತಿ ಇರುವುದು ನಮ್ಮ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಬೇಕಿದೆ ಎಂದು ಪತ್ರಿಭಟಣಕಾರರರು ಹೇಳಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಭೀಮಣ್ಣ ಗೌಡ ಕಟ್ಟಿಮನಿ,ಶಹಾಪುರ ತಾಲ್ಲೂಕ ಅಧ್ಯಕ್ಷರಾದ ನಾಗರಾಜ ರಾಂಕಮಗೇರಾ,ಯಲ್ಲಪ್ಪ ನಾಯ್ಕೋಡಿ,ಧರ್ಮಣ್ಣ ಮಮದಾಪೂರ,ರಾಯಪ್ಪ ರಾಂಕಮಗೇರಾ,ಲಿಂಗಪ್ಪ ಶಹಾಪುರ,ವೀರಣ್ಣಗೌಡ ಶಹಾಪುರ,ಸಂಗಣ್ಣ ಗೌಡ ರಾಂಕಮಗೇರಾ,ಪಂಪಣ್ಣ ಸಾಹುಕಾರ ವಸಕೇರಾ,ಮಲ್ಲಣ್ಣ ಗೌಡ ಅಳಳ್ಳಿ,ಬಸವರಾಜ ಹಳಿಸಗರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
