ಬೀದರ:ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಗೊವಿಂದ ತಾಂದಳೆ ಅವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಮಕ್ಕಳು ಮಾನವೀಯತೆಯನ್ನು ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಸಹಕಾರಿಯಾಗಿ ಕೆಲಸ ಮಾಡಬೇಕೆಂದರು ವೈದ್ಯಕೀಯ ವೃತ್ತಿ ಪವಿತ್ರವಾದದ್ದು ತಮ್ಮ ವೃತ್ತಿ ಬದುಕಿನಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ಯಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ.ನಮ್ಮ ಶಿಕ್ಷಣ ಸಂಸ್ಥೆ ಇಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ.
ಇಂತಹ ಪ್ರತಿಭಾವಂತ ಮಕ್ಕಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಾ ನಮ್ಮ.ಶಿಕ್ಷಣ ಸಂಸ್ಥೆ ಬಂದಿದೆ ಎಂದು ನುಡಿದರು.
ನಂತರ ವಿದ್ಯಾರ್ಥಿಗಳಾದ ಸುಧಿಕ್ಷೀತ ,ಕೃಷ್ಣ , ನಾಗೇಶ ಎಮ್ , ವಿಶ್ವನಾಥ ಹಾಗೂ ವಿಗ್ನೆಶ ಇವರುಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಸಲಾಉದ್ದಿನ, ಬಿರೇಶ ಯಾತನೂರ, ಭೌತಶಾಸ್ತ್ರ ಉಪನ್ಯಸಕರಾದ ಆಸಿಫ್ ಅಲಿ, ಆಂಗ್ಲ ಉಪನ್ಯಾಸಕರಾದ ಸಾಗರ್ ಪಡಸಲೆ, ಗಣಿತ ಉಪನ್ಯಾಸಕರಾದ ಚಂದ್ರಕಾಂತ ಝಬಾಡೆ, ಭೌತಶಾಸ್ತ್ರ ಉಪನ್ಯಾಸಕರಾದ ಮಾಧವ ತಪಸಾಳೆ, ಜೀವಶಾಸ್ತ್ರ ಉಪನ್ಯಾಸಕರಾದ ಸಂತೋಷ ಗಿರಿ, ಗಣೇಶ ರೆಡ್ಡಿ , ಕು. ಅಶ್ವಿನಿ, ಶ್ರೀಮತಿ ಅಂಬಿಕಾ , ನಾಗರಾಜ , ಪ್ರೇಮಕುಮಾರ, ಬಾಲಾಜಿ . ಉಪಸ್ಥಿತರಿದ್ದರು. ಇತರ
ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು ಹಾಗೂ ಜೆ. ಅನೀಲಕುಮಾರ ಜೀವಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ವಂದನಾರ್ಪಣೆಯನ್ನು ರಸಾಯನಶಾಸ್ತ್ರ ಉಪನ್ಯಾಸಕರಾದ ಕು.ಪ್ರಾಜಕ್ತಾ ಇವರು ವಂದಿಸಿದರು.
ವರದಿ – ಸಾಗರ ಪಡಸಲೆ