ಯಾದಗಿರಿ: ಪಟ್ಟಣದ ಲುಂಬಿನಿ ವನದ ಹತ್ತಿರ ಇರುವ ಶಾದಿ ಮಹಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ರಾಜ್ಯ ಸಂಚಾಲಕ ಎಮ್.ಸಿ. ನಾರಾಯಣ ಇವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕರು ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇದೇ
ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ಪರಶುರಾಮ, ನೀಲಾ ನಾಯಕ್, ಭೀಮರಾಯ ಸಿಂಧಿಗೇರಿ, ಸಿದ್ಧಾರ್ಥ್ ಸಿಂಘೆ, ಶಾಂಜೀವ್ ಕಾಂಬ್ಳೆ, ಓಂಕಾರ್ ಕಪ್ಪಗಲ್, ಮಹಿಳಾ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀಮತಿ ಮಂಜುಳಾ ಸುರಪುರ, ಯಾದಗಿರಿ ಜಿಲ್ಲಾ ಸಂಚಾಲಕ ಶರಣು ನಾಟೇಕಾರ್, ಶ್ರೀಮತಿ ಜ್ಯೋತಿ ದೊಡ್ಡಮನಿ, ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮತ್ತು ತಾಲೂಕ, ಹೋಬಳಿ, ಸುತ್ತ ಮುತ್ತಲಿನ ಗ್ರಾಮ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ