ಬೀದರ್:ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಸಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೀದರ್ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾದ್ಯಂತ ವಯೋ ನಿವೃತ್ತಿ ಹೊಂದಿದ ಪ್ರಾಂಶುಪಾಲರ ಮತ್ತು ಉಪನ್ಯಾಸಕರನ್ನು ಹಾಗೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿಗಳಾದ ಗುರು ಬಸವ ಪಟ್ಟದೇವರು ಶಿಕ್ಷಕರಿಗೆ ಶುಭಾಷಯಗಳನ್ನು ಹೇಳಿ ಮಾತನಾಡಿದ ಅವರು
ಡಾ.ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಶಿಕ್ಷಕರನ್ನು ಗುರುತಿಸಿ, ಗೌರವಿಸಬೇಕು ಅವರ ತ್ಯಾಗ,ಪರಿಶ್ರಮವನ್ನು ಈ ದಿನದಂದು ನಾವೆಲ್ಲಾ ನೆನೆಯುವಂತಾಗಿದೆ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರು ತೆರೆ ಹಿಂದೆಯೇ ನಿಂತು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಇಂದು ಭಾರತ ವೈಜ್ಞಾನಿಕವಾಗಿ,ಆರ್ಥಿಕವಾಗಿ ಜಗತ್ತಿನ ಮುಂದೆ ತಲೆಎತ್ತಿ ನಿಂತಿದೆ ಎಂದರೆ ಅದರ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ಹೇಳಿದರು.
ತಾನು ಆರ್ಥಿಕವಾಗಿ,ಸಾಮಾಜಿಕವಾಗಿ ಎಷ್ಟೇ ಸಂಕಷ್ಟದಲ್ಲಿದ್ದರೂ ಶೈಕ್ಷಣಿಕವಾಗಿ ಪ್ರಗತಿಯ ದಾಪುಗಾಲಾಕುವುದರಲ್ಲಿ ಶಿಕ್ಷಕ ಸದಾ ಮುಂದಿರುತ್ತಾನೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕ ತೆರೆ ಹಿಂದೆಯೇ ನಿಂತು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾನೆ ಇಂದು ಭಾರತ ವೈಜ್ಞಾನಿಕವಾಗಿ,ಆರ್ಥಿಕವಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿದೆ ಎಂದರೆ ಅದರ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ಹೇಳಿದರು.
ಅದೇ ರಿತಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬೀದರ್ ನ ಹೆಮ್ಮೆಯ ಶಾಸಕರು ಮತ್ತು ಸಚಿವರು ಮಾನ್ಯ ಪೌರಾಡಳಿತ ಹಾಗು ಹಜ್ ಸಚಿವರಾದ ರಹಿಮ್ ಖಾನ ರವರು ಸಮಾಜದ ಅಂಕುಡೊಂಕು ತಿದ್ದುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವಲ್ಲಿ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ ಇಂತಹ ಶಿಕ್ಷಕರ ಮುಂದೆ ಇಂದು ನಾನಾ ಸವಾಲುಗಳು ಎದುರಾಗಿದ್ದು ಅವೆಲ್ಲವನ್ನೂ ಮೆಟ್ಟಿ ನಿಲ್ಲುವ ಕೆಲಸವಾಗಬೇಕು ಎಂದು ಹೇಳಿದರು.
ಯುವಕರಲ್ಲಿ ಶಿಸ್ತು,ರಾಷ್ಟ್ರಪ್ರೇಮ,ಅಧ್ಯಯನದ ತುಡಿತ,ಸಾಧಿಸುವ ಛಲ ಮೂಡಿಸುವಂತಹ ಕಾರ್ಯವಾಗಬೇಕು ಶಾಲಾ ಕಾಲೇಜು ಹಂತದಲ್ಲೇ ಮಕ್ಕಳಿಗೆ ಬೋದನೆ ಜೊತೆಗೆ ಸಾಹಿತ್ಯ,ಕಲೆ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸ್ಪೂರ್ತಿ ತುಂಬಬೇಕು ಮಕ್ಕಳಿಗೆ ಬಲವಂತವಾಗಿ ಪಠ್ಯದ ವಿಷಯವನ್ನು ತುರುಕುವ ಬದಲಿಗೆ ಖುಷಿಯಿಂದ ಕಲಿಯುವಂತಹ ವಾತಾವರಣ ನಿರ್ಮಿಸಬೇಕು ಎಂದು ನುಡಿದರು ತಂದೆ ತಾಯಿಗಳು ಮಕ್ಕಳನ್ನು ಕೇವಲ ಪಾಲನೆ ಪೋಷಣೆ ಮಾಡಿದರೆ ಶಿಕ್ಷಕರಾದವರು ಅವರ ಜೀವನ ರೂಪಿಸುವ ಕಾರ್ಯ ಮಾಡುತ್ತಾರೆ ಬದುಕುವ ಕಲೆ, ಆತ್ಮಸ್ಥೈರ್ಯ,ಧೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು ಪಠ್ಯದ ಜೊತೆಗೆ ಬದುಕಿನ ಜಂಜಾಟದ ಬಗ್ಗೆಯೂ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹೇಗೆ? ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ ಅನುಸರಿಸಬೇಕಾದ ದಾರಿ,ಪಾಲಿಸಬೇಕಾದ ರೀತಿನೀತಿಗಳ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು ಈ ವಿಚಾರದಲ್ಲಿ ಡಾ.ರಾಧಾಕೃಷ್ಣನ್ ಅವರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಶಿಕ್ಷಕ ಕ್ಷೇತ್ರಕ್ಕೆ ಅರ್ಥವತ್ತಾದ ಚೌಕಟನ್ನು ಹಾಕಿಕೊಂಡು ದೇಶದ ಅಭಿವೃದ್ಧಿಗಾಗಿ ಜೀವನ ಮುಡುಪಾಗಿಟ್ಟ ಡಾ.ರಾಧಾಕೃಷ್ಣನ್ ಅವರು ಹಾಕಿಕೊಟ್ಟ ದಾರಿಯನ್ನು ಶಿಕ್ಷಕರು ಅನುಸರಿಸಬೇಕು ಎಂದು ನುಡಿದರು.
ನಮ್ಮ ಸರ್ಕಾರ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.ಶಿಕ್ಷಕರ ಸಮಸ್ಯೆ,ಸವಾಲುಗಳನ್ನು ಬಗೆಹರಿಸುವಲ್ಲಿ ದಾಪುಗಾಲಿಟ್ಟಿದೆ ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಗೆ ತಕ್ಕಂತೆ ಹೊಂದಿಕೊಳ್ಳಬೇಕು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಮಕ್ಕಳಲ್ಲಿ ಶಾಲಾ ದಿನಗಳಲ್ಲಿ ಶಿಸ್ತು,ರಾಷ್ಟ್ರಪ್ರೇಮ,ಸಾಧಿಸುವ ಉತ್ಸಾಹ ತುಂಬಿದರೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಿದಂತಾಗುತ್ತದೆ ಆ ಕೆಲಸವನ್ನು ಇಂದು ಶಿಕ್ಷಕರು ಮಾಡಬೇಕಿದೆ ಎಂದರು.
ನಂತರದಲ್ಲಿ ಮಾತನಾಡಿದ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಗಂದಗೆ ಅವರು ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಕರು ಕೈಜೋಡಿಸಬೇಕು ಎಂದು ಹೇಳಿದರು ತಾವು ಮಾಡುವ ವೃತ್ತಿಯನ್ನು ಯಾರು ಪ್ರೀತಿಸಿ, ಗೌರವಿಸುತ್ತಾರೋ ಅವರು ಅತ್ಯುನ್ನತ್ತ ಸ್ಥಾನಕ್ಕೇರುತ್ತಾರೆ ಎಂಬುದಕ್ಕೆ ಡಾ.ರಾಧಕೃಷ್ಣನ್ ಅವರಂತಹ ಮಹಾನ್ ವ್ಯಕ್ತಿಯೇ ಸಾಕ್ಷಿ ಸಾಮಾನ್ಯ ಶಿಕ್ಷಕರಾಗಿದ್ದ ವ್ಯಕ್ತಿಯೊಬ್ಬ ಈ ದೇಶದ ರಾಷ್ಟ್ರಪತಿ ಸ್ಥಾನಕ್ಕೇರುತ್ತಾರೆ ಎಂದರೆ ಅದಕ್ಕೆ ಅವರಲ್ಲಿನ ಅಧ್ಯಯನದ ತುಡಿತ,ಸಾಧಿಸುವ ಛಲ,ಶಿಸ್ತಿನ ಜೀವನ,ಸಮಯಪ್ರಜ್ಞೆ,ನಿಸ್ವಾರ್ಥ ಸೇವೆಯೇ ಕಾರಣ ಯಾವುದೇ ಪ್ರತಿಫಲ ಬಯಸದೇ ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿಸಿದ ರಾಧಾಕೃಷ್ಣನ್ ಅವರಂತೆ ಮತ್ತಷ್ಟು ಶಿಕ್ಷಕರು ಉನ್ನತ ಸ್ಥಾನಕ್ಕೇರಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಬೀದರನ ಶಾಲಾ ಶಿಕ್ಷಣ (ಪ.ಪೂ.) ಇಲಾಖೆಯ ಮಾನ್ಯ ಉಪ ನಿರ್ದೇಶಕರಾದ ಚಂದ್ರಕಾಂತ ಶಾಬಾದಕರ್ ಅವರು ಜೀಲ್ಲೆಯ ಉತ್ತಮ ಫಲಿತಾಂಶಕ್ಕಾಗಿ ಕಳೆದ ವರ್ಷ ನನ್ನೊಂದಿಗೆ ಕೈ ಜೋಡಿಸಿ,ಶ್ರಮ ವಹಿಸಿ ಕರ್ನಾಟಕದಲ್ಲಿ ಒಂದೊಳ್ಳೆ ಸ್ಥಾನಕ್ಕೆ ಬರಲು ಸಹಕರಿಸಿದ ಎಲ್ಲ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಅದೇ ರೀತಿ ಮುಂಬರುವ ಪರೀಕ್ಷೆ ಮತ್ತು ಉತ್ತಮ ಫಲಿತಾಂಶಕ್ಕಾಗಿ ಹೀಗೆ ತಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡೈಮಂಡ್ ಕಾಲೇಜಿನ ಅಧ್ಯಕ್ಷರಾದ ಶ್ರೀ ಯರ್ರಬೇಲಿ ಮಾಧವರಾವ್, ಮಾತಾ ಮಾಣಿಕೇಶ್ವರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲೋಕೇಶ್ ಉಡಬಾಳೆ ಹಾಗೂ ಬೀದರ್ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾ ಶ್ರೀ ಸುರೇಶ ಅಕ್ಕಣ್ಣಾ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ್ ಮಂಗಲಗಿ,ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾದ ಡಾ.ಮನ್ಮಥ ಡೋಳೆ ಪ್ರಾಂಶುಪಾಲರ ಸಂಘದ ರಾಜ್ಯ ಪ್ರತಿನಿಧಿಗಳಾದ ಶ್ರೀ ಎಸ್. ಪ್ರಭು,ಉಪನ್ಯಾಸಕರ ಸಂಘದ ಕಾರ್ಯದರ್ಶಿಗಳಾದ ಶ್ರೀ ಶಿವರಾಜ್ ಪಾಟೀಲ್, ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ನರಸಿಂಗ ರೆಡ್ಡಿ ಗದಲೆಗಾಂವ,ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಓಂಕಾರ್ ಸೂರ್ಯವಂಶಿ,ಬೀದರ್ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ತೋರಣೆಕರ್,ಕಮಲನಗರ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಶಿವಾಜಿ ಆರ್.ಎಚ್.ಚಿಟಗುಪ್ಪಾ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಮಾರುತಿ ರೆಡ್ಡಿ,ಭಾಲ್ಕಿ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಜೈಕಾಂತ್ ಗಂಗೂಜಿ , ಬಸವಕಲ್ಯಾಣ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ.ಜೈಶೇನ ಪ್ರಸಾದ
ಹುಮ್ನಾಬಾದ್ ತಾಲೂಕ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿನಾಥ ಚಿಂಚೋಳಿ,ಔರಾದ ತಾಲೂಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ
ಗುಣವಂತ ಮಾಶೇಟ್ಟಿ,ಭಾಲ್ಕಿ ತಾಲೂಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ
ಶ್ರೀ ಸುಖದೇವ,ಹುಮನಾಬಾದ ತಾಲೂಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ
ಶ್ರೀ ವೀರಣ್ಣ ಕಮಲಾಪುರೆ ಮತ್ತು ಪ್ರಾಂಶುಪಾಲರ ಸಂಘ ಹಾಗೂ ಎಲ್ಲಾ ಪದಾಧಿಕಾರಿಗಳು, ಉಪನ್ಯಾಸಕರ ಸಂಘ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.