ಬೀದರ್:ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಆಯೋಜಿಸಿದ
ರಕ್ತದಾನ ಶಿಬಿರ ಬ್ರಿಮ್ಸ್ ಆಸ್ಪತ್ರೆ,ಬೀದರ್ ಸಂಯೋಗದಲ್ಲಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಬೀದರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಬಿಷಪ್ ರಾಬರ್ಟ್ ಮೈಕಲ್ ಮಿರಂದ್ ಗುಲ್ಬರ್ಗ ಧರ್ಮ ಕ್ಷೇತ್ರ,ಫಾದರ್ ಅನಿಲ್ ಜೋಯಲ್ ಪ್ರಸಾದ್, ಫಾದರ್ ವಿಲ್ಸನ್ ಫರ್ನಾಂಡಿಸ್,ಡಾಕ್ಟರ್ ಅನಿಲ್ ಚಿಂತಾಮಣಿ ಡಿಟಿಓ ಪ್ರೋಗ್ರಾಮ್ ಬೀದರ್, ಡಾಕ್ಟರ್ ಮಲ್ಲನಗೌಡ ಪಾಟೀಲ್ ಬ್ಲಡ್ ಬ್ಯಾಂಕ್ ಬ್ರೀಮ್ಸ್ ಬೀದರ್,ಶ್ರೀಮತಿ ಅನಿತಾ ಚಿಂತಾಮಣಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷರು ಬೀದರ್,ಶ್ರೀಮತಿ ಕವಿತಾ ಪ್ರಭಾ ಕಾರ್ಯದರ್ಶಿಗಳು ಇನ್ನರ್ವಿಲ್ ಕ್ಲಬ್ ಬೀದರ್,ಆಯೋಜಕರಾದ ಸಿಸ್ಟರ್ ಕ್ರಿಸ್ತಿನ್ ಮಿಸ್ಕಿತ್,ಸಿಸ್ಟರ್ ರಿತಿಕಾ ಹಾಗೂ ಬ್ರೀಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು,ಕಾರ್ಮೆಲ್ ಸೇವಾ ಟ್ರಸ್ಟ್ ಸಿಬ್ಬಂದಿಗಳು,ಮರಿಯನಿಲಯದ ಕನ್ಯಾ ಭಗಿನಿ ನಿಯರು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೃಷ್ಟಿಕರ್ತನಿಗೆ ವಂದಿಸುವುದರ ಮೂಲಕ ಪ್ರಾರಂಭಿಸಲಾಯಿತು.ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಸಲ ರಕ್ತದಾನ ಮಾಡಿದ ದಾನಿಗಳಿಗೆ ಇದೇ ವೇದಿಕೆ ಮೇಲೆ ಸನ್ಮಾನಿಸಲಾಯಿತು ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯರನ್ನು ಸಿಸ್ಟರ್ ರೀತಾರವರು ಸ್ವಾಗತಿಸಿದರು. ಸಿಸ್ಟರ್ ಕ್ರೇಸ್ಟ್ ರವರು ವಂದಿಸಿದರು.ಇದೇ ಸಂದರ್ಭದಲ್ಲಿ ಗುಲ್ಬರ್ಗ ಧರ್ಮ ಕ್ಷೇತ್ರದ ಪರಮಪೂಜ್ಯ ಬಿಷಪ್ ರಾಬರ್ಟ್ ಮೈಕಲ್ ಮಿರಂದ್ ರವರು ಮಾತನಾಡಿ ಇಲ್ಲಿರುವ ಸಿಸ್ಟರ್ಸ್ ಗಳು 1983 ರಿಂದ ಶಿಕ್ಷಣ ಕ್ಷೇತ್ರದಲ್ಲಿ,ಸಮಾಜ ಸೇವೆಯಲ್ಲಿ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಅವರ ಸೇವೆ ನಿಜವಾಗಿಯೂ ಅಮೂಲ್ಯವಾದದ್ದು ಇಂದು ಮಾತೆ ವೆರೋನಿಕರವರ ದ್ವಿಶತಮಾನೋತ್ಸವದ ಅಂಗವಾಗಿ ಈ ಒಂದು ರಕ್ತದಾನ ಕಾರ್ಯಕ್ರಮವು ನಿಜವಾಗಿಯೂ ತುರ್ತು ಸಂದರ್ಭದಲ್ಲಿ ಎಷ್ಟು ರೋಗಿಗಳ ಪಾಲಿಗೆ ಮರುಜನ್ಮ ನೀಡುವ ಸಂಜೀವಿನಿ ಆಗಲಿದೆ ಸಮಾಜ ನನಗೆ ಏನು ಮಾಡಿದೆ ಎಂಬುದು ಮುಖ್ಯವಲ್ಲ ಆದರೆ ನಾನು ಸಮಾಜಕ್ಕೆ ಏನನ್ನು ಮಾಡಬಹುದು ಎಂಬುದು ಮುಖ್ಯ ನಮ್ಮ ಕೈಲಾದ ಮಟ್ಟಿಗೆ ನಾವು ಸಮಾಜಕ್ಕೆ ಹಾಗೂ ನಮ್ಮ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿದರೆ ಅದಕ್ಕಿಂತ ಗೌರವವಾದ ಸಾರ್ಥಕ ಜೀವನ ಮತ್ತೊಂದಿಲ್ಲ ಎಂದು ಪರಮಪೂಜ್ಯರು ಹೇಳಿದರು ಹಾಗೂ ಇದೇ ಸಂದರ್ಭದಲ್ಲಿ ಶ್ರೀಮತಿ ಅನಿತಾ ಚಿಂತಾಮಣಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷರು ಮಾತನಾಡಿ ರಕ್ತದಾನ ಮಾಡುವುದರಿಂದ ನಮಗೆ ಆಗುವ ಲಾಭಗಳು ಹಾಗೂ ಇದರ ಬಗ್ಗೆ ಜಾಗೃತಿಯನ್ನು ತಮ್ಮದೇ ಮಾತಿನಲ್ಲಿ ಎಲ್ಲರಿಗೂ ಮನಮುಟ್ಟುವಂತೆ ಹೇಳಿದರು ಮತ್ತು ಎಲ್ಲಾ ರಕ್ತದಾನಿಗಳಿಗೆ ತನ್ನ ಮನಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.