ಹನೂರು:ಸಂಘಟನೆ ಮತ್ತು ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾದ್ಯ ಶಾಸಕ ಎಂ.ಆರ್ ಮಂಜುನಾಥ್
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಹನೂರು ಶಾಸಕ ಮಂಜುನಾಥ್ ಜಗದ ಮೊದಲ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆಯು ಸಂತಸ ಮೂಡಿಸಿದೆ ಪುರಾತನ ಕಾಲದಿಂದಲೂ ಭಾರತ ತನ್ನದೇ ಆದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಉಳಿಸಿಕೊಂಡು ಬಂದಿದೆ ಲೋಹದಿಂದ ಆಯುಧಗಳನ್ನು ಮತ್ತು ಒಡವೆಗಳನ್ನು ತಯಾರಿಸಲು ಮತ್ತು ಕುಶಲಕಲೆಗೆ ಮೂಲ ಕಾರಣ ಪುರುಷ ವಿಶ್ವಕರ್ಮರಾಗಿದ್ದಾರೆ ಈ ಸಮುದಾಯಗಳ ಸಾಮಾಜಿಕ ನ್ಯಾಯ ಸರ್ಕಾರದ ಸೋವ್ಲಭ್ಯಗಳನ್ನು ಕೊಡಿಸುವಲ್ಲಿ ಕೆ ಪಿ ನಂಜುಂಡಿ ಅವರ ಹೋರಾಟಕ್ಕೆ ಮತ್ತು
ಕಾರ್ಯವೈಖರಿ ಮೆಚ್ಚುವಂಥದ್ದಾಗಿದೆ ಎಂದು ತಿಳಿಸಿದರು.
ತಮ್ಮದೆ ಕುಲಕಸುಬನ್ನು ಮಾಡುವುದರ ಮೂಲಕ ಶಿಕ್ಷಣಕ್ಕೂ ಅಷ್ಟೇ ಒತ್ತು ನೀಡುವಂತೆ ಕೆಲಸ ಮಾಡಬೆಕೆಂಬುದನ್ನು ತಿಳಿಸಿದರು.
ಇದಕ್ಕೂ ಮೊದಲು ಪಟ್ಟಣದ ಮುಖ್ಯರಸ್ತೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬೆಳ್ಳಿ ರಥದಲ್ಲಿ ವಿಶ್ವಕರ್ಮ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಕಾರ್ಯಧ್ಯಕ್ಷ ಪಿ.ನಂಜುಂಡಿ ತಹಸಿಲ್ದಾರ್ ಗುರುಪ್ರಸಾದ್,ಇ ಓ ಉಮೇಶ್,ಪಟ್ಟಣ ಪಂಚಾಯತಿ ಸದಸ್ಯರಾದ ಹರೀಶ್ ಗಿರೀಶ್ ಸಂಪತ್ ಕುಮಾರ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮೂರ್ತಿ ವಿಶ್ವಕರ್ಮ ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ಸೌಭಾಗ್ಯ,ಸ್ಥಳೀಯ ಮುಖಂಡರಾದ
ಡಾ.ನಾಗಲಿಂಗಪ್ಪ ಇತರರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.