ಕಲಬುರಗಿ:ಸರ್ಕಾರಿ ಪ್ರೌಢಶಾಲೆ ಬಿಳವಾರ ಗ್ರಾಮದಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಶ್ರೀದೇವಿ ಗಂಡ ಹನುಮಂತ ದಂಡಗುಲ್ಕರ ಹಾಗೂ ಶಾಲೆಯ ಹಿರಿಯ ಶಿಕ್ಷಕರು ನಬೀಲಾಲ್ ನಾಟಿಕರ್ ಕಾರ್ಯಕ್ರಮದ ಉಸ್ತುವಾರಿ ನಿಜಲಿಂಗಪ್ಪ ಮಾನ್ವಿ ಶಿಕ್ಷಕರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಭೀಮರಾಯನ ಗುಡಿ ಬಿ ಎಸ್ ಸಿ ಕೃಷಿ ವಿದ್ಯಾರ್ಥಿನಿಯರು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಬ್ರುವಾಹನ ದಂಡಗುಲ್ಕರ್ ಹಾಲುಮತ ಸಮಾಜದ ಯುವ ಮುಖಂಡರು ಮಾಳಪ್ಪಎಸ್ ಪೂಜಾರಿ ಹಾಗೂ ಜಟ್ಟಪ್ಪ ಎಸ್ ಪೂಜಾರಿ ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆ ನಂದಿನಿ ಪಡಿಶೆಟ್ಟಿ ಹಾಗೂ ರಜಿಯಾ ಬೇಗಂ ಸಹಾಯಕ ನಿರೂಪಕರು ರಾಜೇಶ್ವರಿ ಹನುಮಂತರಾಯ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
