ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶತಮಾನ ಕಂಡ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ


ಮಂಗಳೂರು:ಶತಮಾನ ಕಂಡ ಚೇಳ್ಯಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂವತ್ತು ವರ್ಷ ಸೇವೆಸಲ್ಲಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿಯವರಿಗೆ ಶಾಲಾಭಿವೃದ್ಧಿ ಸಮಿತಿ,ಶಾರದಾ ವಿದ್ಯಾ ಸೇವಾಟ್ರಸ್ಟ್,ಹಳೆ ವಿದ್ಯಾರ್ಥಿ ಸಂಘ,ಶಿಕ್ಷಕಿ ವರ್ಗ,ವಿದ್ಯಾರ್ಥಿಗಳು ಮತ್ತು ಪೋಷಕರು ಜೊತೆಗೂಡಿ ಅದ್ದೂರಿಯ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಶ್ರೀಮತಿ ಕೃಷ್ಣವೇಣಿ ಮತ್ತು ಪತಿ ಶ್ರೀದಿನಕರ್ ಅವರನ್ನು ಜೊತೆಯಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ತಮ್ಮ ಭಾಷಣದಲ್ಲಿ ಶ್ರೀಮತಿ ಕೃಷ್ಣವೇಣಿ ತಮ್ಮ ಸುಧೀರ್ಘ ಮೂವತ್ತು ವರ್ಷಗಳ ಅನುಭವವನ್ನು ಹಂಚಿಕೊಡು ತಮ್ಮ ವೃತ್ತಿಯ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸಂಸ್ಥೆಗಳನ್ನು ಬೇರೆ ಬೇರೆ ಅವಧಿಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು,ಪಂಚಾಯತ್ ಅಧ್ಯಕ್ಷರನ್ನು,ತಮ್ಮ ಸಹ ಅಧ್ಯಾಪಕ ವರ್ಗವನ್ನು , ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ನೆನಪಿಸಿ,ಅವರೆಲ್ಲ ಕೊಟ್ಟ ಸಹಕಾರವನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು ತಮ್ಮ ಅವಧಿಯ ನಂತರವೂ ಶಾಲೆ ಉತ್ತಮ ಸ್ಥಿತಿಯಲ್ಲಿ ಮುಂದುವರಿದುಕೊಂಡು ಹೋಗಬೇಕೆಂಬ ಆಶಯದಿಂದ ಎರಡು ವರ್ಷಗಳ ಹಿಂದೆ ಶಾರದಾ ವಿದ್ಯಾ ಸೇವಾ ಟ್ರಸ್ಟ್ ಸ್ಥಾಪಿಸಿ, ಆಂಗ್ಲ ಮಾಧ್ಯಮ ಆರಂಭಿಸುವಲ್ಲಿ ಇವರ ಪಾತ್ರ ದೊಡ್ಡದು ಶಾಲೆಯ ಶತಮಾನೋತ್ಸವ ಇವರ ಅವಧಿಯಲ್ಲೇ 2012 ರಲ್ಲಿ ಜರಗಿತ್ತು ಶಾಲೆಯ ದುರಸ್ಥಿ ಕಾರ್ಯಗಳನ್ನು ಕಾಲ-ಕಾಲ ಕ್ಕೆ ಮುಂದಾಳುತ್ವ ವಹಿಸಿ ಮಾಡಿಸಿದ್ದರು ಇದು ಅವರ ವೃತ್ತಿಗೆ ನಿವೃತ್ತಿ,ಮುಂದೆಯೂ ಅವರ
ಸ್ವ ಇಚ್ಛೆಯಿಂದ ಸೇವೆ ಸಲ್ಲಿಸುವ ಭರವಸೆ ನೀಡಿದ್ದಾರೆ ಹಾಗೂ ತಾನು ನಿವೃತ್ತಿ ಹೊಂದುವಾಗ ಶಾಲೆಗೆ ಒಂದು ಉತ್ತಮ ಕೊಡುಗೆ ಕೊಡುವ ಉದ್ದೇಶದಿಂದ ಶಾಲೆಯ ಮುಂಭಾಗದ ಸಭಾಂಗಣಕ್ಕೆ ಮೇಲ್ಚಾವಣಿ ಮಾಡಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀಜಯಾನಂದ ವಹಿಸಿದ್ದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಶಾಲೆಯ ಗಂಟೆ ಇನ್ನೂ ನೂರು ವರ್ಷ ಬಾರಿಸಲಿದೆ ಎಂಬ ಭರವಸೆ ಇತ್ತರು ಮುಖ್ಯ ಅಥಿತಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಡಾ.ಜ್ಯೋತಿ ತಮ್ಮ ಭಾಷದಲ್ಲಿ ಶ್ರೀಮತಿ ಕೃಷ್ಣವೇಣಿ ಅವರ ವೃತ್ತಿ ಜೀವನದ ಸಾಧನೆಯನ್ನು ಶ್ಲಾಘಿಸಿದರು ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ ತಮ್ಮ ಭಾಷಣದಲ್ಲಿ ಶ್ರೀಮತಿ ಕೃಷ್ಣ ವೇಣಿ ಟೀಚರ್ ಅವರ ವಿವಿಧ ಕೊಡುಗೆಗಳನ್ನು ಸ್ಮರಿಸಿ ಅವರು ಈ ಶಾಲೆಯ “ರತ್ನ “ಎಂದು ಬಣ್ಣಿಸಿದರು,ಟ್ರಸ್ಟ್ ನ ಕೋಶಾಧಿಕಾರಿ ಶ್ರೀ ಸುಧಾಕರ ಶೆಟ್ಟಿ ತಮ್ಮ ಭಾಷಣದಲ್ಲಿ
ಶ್ರೀಮತಿ ಕೃಷ್ಣವೇಣಿ ಟೀಚರ್ ಅವರ ಕೊಡುಗೆಗಳನ್ನು ನೆನಪಿಸಿ,ಶಾಲೆಯ ಕಳೆದ ನೂರು ವರ್ಷದ ಇತಿಹಾಸದಲ್ಲಿ ಮಧ್ಯ ಶ್ರೀವೆಂಕಟರಾಯರು,ಶ್ರೀಗಣಪತಿ ಅಧಿಕಾರಿ,ಶ್ರೀವೆಂಕಪ್ಪ ಮಾಸ್ಟರನ್ನು ನೆನಪಿಸುತ್ತಾ ಮುಂದಿನ ನೂರು ವರ್ಷ ಶ್ರೀಮತಿ ಕೃಷ್ಣವೇಣಿ ಅವರ ಹೆಸರನ್ನು ನೆನಪಿಸಬೇಕೆಂಬ ಕರೆಕೊಟ್ಟರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ರಾಜರವರು ಶುಭ ಹಾರೈಸಿದರು.ಸಹ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ತಮ್ಮ ಮತ್ತು ಶ್ರೀಮತಿ ಕೃಷ್ಣವೇಣಿಯವರ ಕಳೆದ ಹದಿನೇಳು ವರ್ಷಗಳ ವೃತ್ತಿ ಜೀವನವನ್ನು ನೆನಪಿಸಿಕೊಂಡರು.ಕಾಲೇಜು ಉಪನ್ಯಾಸಕಿ ಶ್ರೀಮತಿ ಶೋಭಾ ಶರ್ಮ ತಮ್ಮ ಭಾಷಣದಲ್ಲಿ ಶ್ರೀಮತಿ ಕೃಷ್ಣವೇಣಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ವೇದಿಕೆಯಲ್ಲಿ ಟ್ರಸ್ಟ್ ಸದಸ್ಯರಾದ ಶ್ರೀ ಶ್ರೀನಿವಾಸ ಅಮೀನ್,ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ದೀಪಕ್ ಅವರು ತಮ್ಮ ಬಾಲ್ಯದ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿ ಅವರ ಬಗ್ಗೆ ಗೌರವ ವ್ಯಕ್ತಪಡಿಸಿ ಮತ್ತು ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಶ್ರೀಮತಿ ಸುರೇಖಾ ಕಾರ್ಯಕ್ರಮ ನಿರ್ವಹಿಸಿದರು, ಸಹ ಶಿಕ್ಷಕಿ ಶ್ರೀಮತಿ ದೀಪಾ ಶ್ರೀಮತಿ ಪವಿತ್ರಾ, ಶ್ರೀಮತಿ ಸುನೀತಾ,ಕುಮಾರಿ ಮಣಿತ ಹಾಗೂ ಶಾಲಾ ಸಹಾಯಕಿಯರಾದ ಶ್ರೀಮತಿ ಸುಜಯ ಮತ್ತು ಶ್ರೀಮತಿ ರೂಪ ಸಹಕರಿಸಿದರು,ವರ್ಗಾವಣೆ ಗೊಂಡ ಸಹ ಶಿಕ್ಷಕಿ ಶ್ರೀಮತಿ ಚಂದ್ರಿಕಾ,ಶ್ರೀಮತಿ ರೂಪಲಿನ್ ಕ್ಲೋತಿ ಕೋವೆಲ್ಲೋ,ಅಂಗನವಾಡಿ ಶಿಕ್ಷಕಿ ಶ್ರೀಮತಿ ವಂದನಾ ಮತ್ತು ಸಹಾಯಕಿ ಉಪಸ್ಥಿತರಿದ್ದರು.ವಿದ್ಯಾರ್ಥಿ ನಾಯಕಿ ಕುಮಾರಿ ಖುಷಿ ವಿದಾಯ ಭಾಷಣ ಮಾಡಿದರು. ಶಾಲಾಮಕ್ಕಳು ತಮ್ಮ ನೆಚ್ಚಿನ ಮುಖ್ಯೋಪಾಧ್ಯಾಯಿನಿಯ ಬೀಳ್ಕೊಡುಗೆಗೆ ಹಾಡು ಹಾಡಿ,ಪಾದಕ್ಕೆ ನಮಸ್ಕರಿಸಿ ಗುರು ನಮನ ಸಲ್ಲಿಸಿದರು ಪೋಷಕರು ಶ್ರೀಮತಿ ಕೃಷ್ಣ ವೇಣಿ ಟೀಚರ್ ಅವರಿಗೆ ಶುಭ ಹಾರೈಸಿದರು ಶ್ರೀಮತಿ ದೀಪಾ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ