ಶಹಾಪುರ:ಈಶಾನ್ಯ ಪದವೀಧರರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಿ ಎಂದು ಸುರೇಶ್ ಸಜ್ಜನ್ ಮನವಿ ಮಾಡಿದರು.
ನವೆಂಬರ್ 6 ತಾರೀಖು ಕೊನೆ ದಿನವಾಗಿದೆ ಅದಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡದೇ ವಂಚಿತರಾಗಬಾರದು ಎಂದು ಹೇಳಿದರು ಎರಡು ಮೂರು ವರ್ಷಗಳಿಂದ ಸತತವಾಗಿ ಪದವೀಧರರ ಹೆಸರನ್ನು ನೊಂದಣಿ ಮಾಡಿಸಲು ಯಾದಗಿರಿ ಯಲ್ಲಿ ಆಫೀಸ್ ಮಾಡಿ ಹಳ್ಳಿ ಹಳ್ಳಿಗೆ ಯುವಕರನ್ನು ಕಳಿಹಿಸಿ ಅತಿ ಹೆಚ್ಚು ಪದವೀಧರರ ಹೆಸರನ್ನು ನೋಂದಾಯಿಸಲು ವಿಶೇಷ ಕಾಳಜಿ ವಹಿಸಿದ್ದಾರೆ. ಅದಕ್ಕೆ ಯಾರೂ ಉಳಿಯದ ಹಾಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೊಂದಣಿ ಮಾಡಿಸುವ ಗುರಿಯನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ಗುಲ್ಬರ್ಗಾ,ಬೀದರನಲ್ಲಿ ಕೂಡಾ ಪದವೀಧರರ ಆಫೀಸ್ ತೆರೆಯಲಾಗಿದೆ ಎಂದರು.
ಕೊಪ್ಪಳ,ರಾಯಚೂರು,ವಿಜಯನಗರದಲ್ಲಿ ಕೂಡಾ ಯುವಕರನ್ನು ನೇಮಿಸಿ ಹೆಚ್ಚಿನ ಜಾಗೃತಿ ಮೂಡಿಸಿ ಈ ಅತಿ ಹೆಚ್ಚು ಪದವೀಧರರ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ಉದ್ದೇಶವಾಗಿದೆ ಎಂದು ಡಾ.ಸುರೇಶ್ ಆರ್ ಸಜ್ಜನ ಅವರು ಹೇಳಿದರು. ನಿಮ್ಮ ಹೆಸರು ಸೇರ್ಪಡೆಗೆ ಅರ್ಜಿ ನಮೂನೆ 18 ರಲ್ಲಿ ನೋಂದಾಯಿಸುವಂತೆ ಡಾ.ಸುರೇಶ್ ಆರ್.ಸಜ್ಜನ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಅರ್ಹತಾ ದಿನಾಂಕ 1/11/2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 1/11/2020 ಕ್ಕಿಂತ ಹಿಂದೆ ಮಾನ್ಯತೆ ಪಡೆದ ಮೊದಲು ಪದವಿ ಪಡೆದ ಪದವೀಧರರು ಭಾವಚಿತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಂಕಪಟ್ಟಿ ಆಧಾರ್ ಕಾರ್ಡ್,ಚುನಾವಣೆ ಗುರುತಿನ ಚೀಟಿ ಹಾಗೂ ವಾಸಸ್ಥಳದ ದಾಖಲೆಗಳನ್ನು ನ.6 ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.