ಬಸವನ ಬಾಗೇವಾಡಿ:ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಧರೆಪ್ಪ ಜಕ್ಕಪ್ಪ ಮಸಳಿ ಇವರ ಅಧ್ಯಕ್ಷತೆಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನ ಜರುಗಿತು.
ಈ ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಮೊದಲಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಹಿಟ್ನಳ್ಳಿಯವರು ಆಂದೋಲನದ ಉದ್ದೇಶವನ್ನು ವಿವರಿಸಿ ಸ್ವಚ್ಛತೆಯೇ ಸೇವೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಆಂದೋಲನದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಬಸಪ್ಪ ದೊಡಮನಿ,ಸದಸ್ಯರಾದ ಅಶೋಕ ಇಂಡಿ, ವಿಶ್ವನಾಥ ತಡಲಗಿ,ನಾಗು ಯಲಗಟ್ಟಿ,ಯಲ್ಲಪ್ಪ ಜಾಲವಾದಿ,ಗ್ರಾಮ ಪಂಚಾಯತ ಕಾರ್ಯದರ್ಶಿ ಹಣಮಂತರಾಯ ಪಾಟೀಲ,ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಯವರು ಭಾಗಿಯಾಗಿ ಗ್ರಾಮದ ವಿವಿಧ ಓಣಿಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.
