ಯಾದಗಿರಿ:ಶಹಾಪುರ ತಾಲ್ಲೂಕಿನ ಟೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟೊಣ್ಣೂರ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಬೀರಪ್ಪ ಸರ್ ಮಾತನಾಡಿ ಟೊಣ್ಣೂರ ಗ್ರಾಮದಲ್ಲಿ 16 ವರ್ಷ ಕಾಲ ಸೇವೆ ಸಲ್ಲಿಸಲು ಕಾರಣೀಕರ್ತರಾದ ಊರಿನ ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಟೊಣ್ಣೂರ ಗ್ರಾಮದ ಮುದ್ದು ಮಕ್ಕಳು ಮತ್ತು ಗ್ರಾಮಸ್ಥರು ಎಲ್ಲಾರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಮುಖ್ಯ ಗುರುಗಳು ಸುಧಾಕರ್ ಸರ್ ನಮ್ಮ ಟೊಣ್ಣೂರ ಶಾಲೆ ಇಷ್ಟೊಂದು ಸುಂದರವಾಗಿ ಕಾಣುತ್ತಿದೆ ಎಂದರೆ ಅದಕ್ಕೆ ಬೀರಪ್ಪ ಸರ್ ಕಾರಣ ಎರಡು ವರ್ಷಗಳಿಂದ ಮಹಾ ಮಾರಿ ಕೊರೋನಾ ದಲ್ಲಿ ಬೀರಪ್ಪ ಸರ್ ಮನೆಯಲ್ಲಿ ಕೂಡದೆ ಶಾಲೆಯ ಸುಂದರ ವನ ನಿರ್ಮಾಣ ಮಾಡಿದ ಇವರು ಇಂದು ಶಾಲೆಯಲ್ಲಿ ಇರುವ ಒಂದೊಂದು ಗಿಡ ಮರ ಹೇಳುತ್ತದೆ ಇದಕ್ಕೆ ಬೀರಪ್ಪ ಸರ್ ಶ್ರಮವೇ ಕಾರಣ ಇದು ಅಲ್ಲದೆ ನಮ್ಮ ಟೊಣ್ಣೂರ ಶಾಲೆಗೆ ಯಾದಗಿರಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ತಂದು ಕೊಟ್ಟವರು ಬೀರಪ್ಪ ಸರ್ ನಾನು ಮಾತಾಡೋದು ತುಂಬಾನೇ ಇದೆ ಆದರೆ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಸುಧಾಕರ್ ಮುಖ್ಯ ಗುರುಗಳು ಹೇಳಿದರು.
ಟೊಣ್ಣೂರ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಮಹಿಳೆಯರು ಇಂತಹ ಒಳ್ಳೆಯ ಶಿಕ್ಷಕರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಣ್ಣೀರು ಹಾಕಿದರು. ಇಷ್ಟೊಂದು ಕಷ್ಟದ ನಡುವೆ ಊರಿನ ಗ್ರಾಮಸ್ಥರು ಶಾಲಾ ಶಿಕ್ಷಕರು ಸೇರಿ ದಂಪತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಟೊಣ್ಣೂರ ಗ್ರಾಮದ ಗುರು ಹಿರಿಯರು,ಸರ್ವ ಸದಸ್ಯರು ಹಾಗೂ ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಗ್ರಾಮಸ್ಥರು ಶಾಲೆ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.