ಭಾಲ್ಕಿ ನಗರದ ಸಿಬಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ ರೆಡ್ಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಇವತ್ತು ನಾವು ಇಬ್ಬರು ಮಹಾತ್ಮರುಗಳ ಜನ್ಮದಿನವನ್ನು ಆಚರಿಸುತ್ತಾ ಇದ್ದೇವೆ.
ಇಬ್ಬರೂ ಕೂಡಾ ಮಹತ್ತರ ಕೆಲಸಗಳನ್ನು ಮಾಡಿದ ಕಾರಣ ಅವರನ್ನು ಮಹಾತ್ಮರನ್ನಾಗಿ ನಾವು ಕಾಣುತ್ತೇವೆ ಮಹಾತ್ಮ ಗಾಂಧೀಜಿಯವರ ಬಗ್ಗೆ ಹೇಳುವುದಾದರೆ ಅವರು ಅನೇಕ ಕಷ್ಟಗಳನ್ನ ಸಹಿಸಿಕೊಂಡು,ಬೇರೆ ಬೇರೆ ರಾಷ್ಟ್ರಗಳಲ್ಲಿ ಆದಂತಹ ಅನೇಕ ಅನುಭವಗಳ ಆಧಾರದ ಮೇಲೆ ನಮ್ಮ ರಾಷ್ಟ್ರವನ್ನು ಕಟ್ಟುವಂತಹ ಅಪೂರ್ವವಾದ ಕೆಲಸವನ್ನು ಮಾಡಿದ್ದಾರೆ.ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಯವರು ಕೂಡಾ ಬಾಲ್ಯದಲ್ಲಿ ಬಹಳಷ್ಟು ಕಷ್ಟಗಳನ್ನ ಅನುಭವಿಸಿ,ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವಂತಹ ದೃಢ ಸಂಕಲ್ಪವನ್ನು ಮಾಡಿ ಶ್ರಮಿಸಿದ ಕಾರಣದಿಂದಲೇ ಅವರು ಪ್ರಧಾನಮಂತ್ರಿ ಹುದ್ದೆಗೆ ಏರಿದರು.ಪ್ರಧಾನಮಂತ್ರಿ ಆದಮೇಲೆ ಕೂಡಾ ರಾಷ್ಟ್ರದ ಕುರಿತಾಗಿ,ರಾಷ್ಟ್ರದ ಅಭಿವೃದ್ಧಿಯ ಕುರಿತಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಜೈ ಜವಾನ್ ಜೈ ಕಿಸಾನ್ ಎಂಬ ಅವರ ಘೋಷವಾಕ್ಯ ಬಹಳಷ್ಟು ಪ್ರಸಿದ್ಧವಾಗಿದೆ.
ಎಂದು ಹೇಳುತ್ತಾ ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತ್ಯ ಸಹನೆ ತಾಳ್ಮೆ ಎಲ್ಲವನ್ನೂ ಮನದಟ್ಟು ಮಾಡಿಕೊಳ್ಳಬೇಕು ಎಂದರು .
ಈ ಸಂದರ್ಭದಲ್ಲಿ ಸೇರಿದ್ದ ಉಪನ್ಯಾಸಕರು ಎಲ್ಲರೂ ಕೂಡಾ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಶ್ರಿಕಾಂತ ಪ್ಯಾಗೆ ಸ್ವಾಗತಿಸಿದರು,ರಾಜ್ಯಶಾಸ್ತ್ರದ ಉಪನ್ಯಾಸಕರಾದ ಕಾಳಿದಾಸ ಬೌದ್ದೆ ವಂದಿಸಿದರು.ಶಿವಧೂತ್ ರಾಥೊಡ್ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ್ ಲಕ್ಕಾ,ಶ್ರದ್ಧಾ ಚೌದರಿ,ಅಂಜಲಿ ಕೋಟೆ,ಶಾಂತಕುಮಾರ್ ಹೊನ್ನಾ ಹಣಮಂತ ಮೇತ್ರೆ,ಆಶಾ ಪಿ.ಎಚ್.ಕೃಷ್ಣ ಬಿರಾದಾರ್,ಪಾರ್ವತಿ ತಮ್ಸಂಗಿ,ಮೀನಾಕ್ಷಿ , ಗೀತಾ,ಸಂಗೀತಾ,ಜಗದೇವಿ,ವಿಷ್ಣು ಉಪಸ್ಥಿತರಿದ್ದರು.
ವರದಿ:ಸಾಗರ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.