ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ
ಭಾತಂಬ್ರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋರಚಿಂಚೋಳಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಮನೋಹರ ಹೊಲ್ಕರ್ ಅವರು ಭಾಗವಹಿಸಿದ್ದರು.
ಬಿ.ಆರ್.ಪಿ ಗಳಾದ ಸಂತೋಷ್ ಮುದಾಳೆ ಅವರು ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಒಂದು ಒಳ್ಳೆಯ ವೇದಿಕೆ ಎಂದು ಹೇಳಿದರು ಮತ್ತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಶುಭಾಷ್ ಬಾವಗೆ ಮತ್ತು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗು ಖ್ಯಾತ ವಾಗ್ಮಿಗಳು ಆದ ವೀರಣ್ಣ ಕಾರಬಾರಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷಕುಮಾರಿ ವಾಡೆ ಅವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಶಾಲಾ ಮುಖ್ಯ ಗುರುಗಳು ಪ್ರಾಸ್ತಾವಿಕ ಮಾತುಗಳನ್ನು ಆಡಿದರು ಹಾಗೂ ಶಿಕ್ಷಕರಾದ ಉತ್ತಮ ಶಿಂದೆ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ದಿಗಂಬರ ಹಾಸನಾಳೆ,ಪ್ರದೀಪ್ ಗುಪ್ತ ಮತ್ತು ಹಮೀದ್ ಹಾಗೂ ದೇವಿದಾಸ ದಪಡೆ ಅವರು ಇದ್ದರು ಹಾಗು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನವನಾಥ ಮೋಲ್ಕೆರೆ ಮತ್ತು ಸದಸ್ಯರು ಇದ್ದರು ಅದೇ ರೀತಿ ಶಿಕ್ಷಕರಾದ ನಿರಂಜಪ್ಪ ಪಾತ್ರೆ, ಬಾಲಾಜಿ ಬೈರಾಗಿ,ಬಸವರಾಜ ಮಡಿವಾಳ, ಅಶೋಕ ತಂಬೊಳೆ,ರತ್ನಾದೀಪ ಹುಲ್ಸುರೆ, ಅರವಿಂದ ಪಾಟೀಲ್,ವೈಜೀನಾಥ್ ಪಾಟೀಲ್, ಅಶೋಕ್ ಬಿರಾದಾರ್,ಸತ್ಯವಾನ್ ಕಾಂಬಳೆ, ಸುಧಾಕರ ಗಾಯಕವಾಡ್,ಸಂತೋಷಕುಮಾರ್ ವಾಡೆ,ರಾಮರಾವ್ ಬಾನ,ಬಿ.ಆರ್.ಪಿ ಗಳಾದ ಆನಂದ ಅವರು ಇದ್ದರು ಮತ್ತು ಭಾತಂಬ್ರಾ ಕ್ಲಸ್ಟರ್ ನ ಎಲ್ಲಾ ಶಾಲೆಯ ಮುಖ್ಯಗುರುಗಳು ಶಿಕ್ಷಕರು, ಹಾಗು ವಿವಿಧ ಶಾಲೆಗಳಿಂದ ಬಂದಿದ್ದ ತೀರ್ಪುಗಾರರು,ಗೋರಚಿಂಚೋಳಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.