ಯಾದಗಿರಿ:ಶಹಾಪೂರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಹೊರ ವಲಯದ ಗುಡ್ಡ ಗಾಡುಗಳ ನಡುವೆ ಕೆರೆಯ ದಡದ ನಿಸರ್ಗದ ಮಡಿಲಲಿ ನೂತನ ಶ್ರೀ ಗೌರಿ ಶಂಕರ ಶಾಂತಿ ಯೋಗಾ ಆಶ್ರಮದ ಪರಮ ಪೂಜ್ಯರಾದ ಶ್ರೀ ಮಹಾಂತ ಶಿವಯೋಗಿಗಳು ಲೋಕ ಕಲ್ಯಾಣಕ್ಕಾಗಿ ಹಾಗೂ ವಿಶ್ವ ಶಾಂತಿಗಾಗಿ ಮೂವತ್ತೆಂಟು ದಿನಗಳ ಕಾಲ ತಪೋನುಷ್ಠಾನ ಕೈಗೊಂಡಿದ್ದರು.ದಿನಾಂಕ 28/09/2023 ಸಾಯಂಕಾಲ ಏಳು ಗಂಟೆಗೆ ಆಕಾಶವಾಣಿ ಕಲಾವಿದರಾದ ಪಂ.ಮಲ್ಲಿಕಾರ್ಜುನ ಶಾಸ್ತ್ರೀಗಳು ಐನಾಪೂರ ಇವರಿಂದ ಆರ್ಶಿವಚನ ದಿನಾಂಕ 29 ರಂದು ಬೆಳಿಗ್ಗೆ ಏಳು ಗಂಟೆಗೆ ಮೌನ ಅನುಷ್ಠಾನ ಮುಕ್ತಯವಾಗುವದು.
ಬೆಳಿಗ್ಗೆ ಹತ್ತು ಗಂಟೆಗೆ ರುದ್ರಾಭಿಷೇಕ ಹೋಮ, ಹವನ ಕಾರ್ಯಕ್ರಮ ನೆರವೇರುವುದು.
ನಂತರ ಧರ್ಮಸಭೆ ನಡೆಯುವದು ಈ ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ಷ.ಬ್ರ ಕರುಣೇಶ್ವರ ಮಹಾಸ್ವಾಮಿಜಿ ಕಂಚಳಕುಂಟಿ ನಂದೀಶ್ವರ ಮಠ ಸಂಗಮ,ಪರಮ ಪೂಜ್ಯ ಶ್ರೀ ಗಿರಿಧರ ಶಿವಾಚಾರ್ಯರು ಹಿರೇಮಠ ರಸ್ತಾಪೂರ,ಪರಮ ಪೂಜ್ಯ ಶ್ರೀ ಬಸಯ್ಯ ತಾತನವರು,ಶ್ರೀ ಚರಬಸವೇಶ್ವರ ಸಂಸ್ಥಾನ ಶಹಾಪೂರ,ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಏಕದಂಡಿಮಠ ಶಹಾಪೂರ,ಶ್ರೀ ವೇದಮೂರ್ತಿ ಅಯ್ಯಣ್ಣ ಶಾಸ್ತ್ರೀಗಳು,ಶ್ರೀ ದೇವಿ ಆರಾಧಕರ ಹಿರೇಮಠ ವಸ್ತಾರಿ ಜೇವರ್ಗಿ,ಪೂಜ್ಯ ಶ್ರೀ ರಾಯಣ್ಣ ಮುತ್ಯಾ ವಗ್ಗರಾಯಣ್ಣನ ಪೂಜಾರಿ ವಿಭೂತಿಹಳ್ಳಿ, ಪರಮ ಪೂಜ್ಯ ಶ್ರೀ ಮಲ್ಲಕಾರ್ಜುನ ಮುತ್ಯಾ ಮಹಲರೋಜ,ಪರಮ ಪೂಜ್ಯ ಶ್ರೀ ಸಿದ್ದರಾಮಯ್ಯ ಗುರುವಿನಮಠ ಶಹಾಪೂರ,ಪೂಜ್ಯ ಶ್ರೀ ಋಷಿಕುಮಾರ ಮಹಾಸ್ವಾಮಿಗಳು ಗುಳಗುಳಿ ತಾ.ರೋಣ ಇನ್ನೂ ಹಲವಾರು ಹರ ಗುರು ಮುನಿಗಳು ಅಗಮಿಸುವರು.
ಶ್ರೀಗಳ ಕಿರು ಪರಿಚಯ:
ಶ್ರೀ ಗಳ ಪೂರ್ವ ಆಶ್ರಮದ ಬಗ್ಗೆ ನನಗೆ ಬಹಳಷ್ಟು ಗೊತ್ತಿಲ್ಲ ಪ್ರಾಯಶಃ ಅವರಿಗೂ ಅದು ನೆನಪಿರಲಿಕಿಲ್ಲ ಏಕೆಂದರೆ ಸಂತರಿಗೆ ಸ್ವಂತದ್ದೂ ಅಂತ ಇರುವುದಿಲ್ಲ ಒಮ್ಮೆ ಮನೆ ಬಿಟ್ಟು ಬಂದ ಮೇಲೆ ಅವರೆಂದೂ ಹುಟ್ಟಿದ ಮನೆಗೆ ಕಾಲಿಟ್ಟಿಲ್ಲ ಎಂತಹ ಪ್ರಸಂಗದಲ್ಲೂ ಈ ಮಟ್ಟದ ವೈರಾಗ್ಯವನ್ನು ನಾನೆಂದೂ ಕಂಡಿಲ್ಲ.
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಿರೂರ ತೊಂಬದೊಡ್ಡಿ ಗ್ರಾಮದ ದಿವಂಗತ ಮಲ್ಲಯ್ಯ ಮತ್ತು ಶ್ರೀಮತಿ ಮಡಿವಾಳಮ್ಮ ದಂಪತಿಗಳ ಮಗ ಉದ್ಯೋಗ ಅರಸಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಂಗರಗಾ ಬಿ, ಗ್ರಾಮಕ್ಕೆ ಬಂದಿದ್ದರು ಶ್ರೀ ಮಹಾಂತಯ್ಯ ಹಾಗೂ ಶ್ರೀ ಬಸಯ್ಯ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು ಇರುವರು.ಮಹಾಂತಯ್ಯನವರು ಪಿ.ಯು.ಸಿ ವರೆಗೆ ವ್ಯಾಸಂಗ ಮಾಡಿದ್ದಾರೆ.ಇವರ ತಂದೆ ದಿವಂಗತ ಮಲ್ಲಯ್ಯ ಹಂಗರಗಾ ಬಿ.ದಲ್ಲಿ ಆರ್.ಎಂ.ಪಿ. ವೈದ್ಯರಾಗಿ ಕೆಲಸ ಮಾಡುತಿದ್ದರು.
ಇವರು ಮಾಜಿ ಮುಖ್ಯ ಮಂತ್ರಿಗಳಾದ ದಿವಗಂತ ಅಪ್ತರಾಗಿದ್ದರು ಶ್ರೀಗಳು ಓದಿನ ಜೊತೆ ಜೊತೆಗೆ ಅವರ ತಂದೆಯಿಂದಲೇ ವೈದ್ಯಕೀಯ ತರಬೇತಿ ಪಡೆದರು ನಂತರ ಓದು ಮುಗಿಸಿ ಪಟ್ಟಣಕ್ಕೆ ಉದ್ಯೋಗ ಅರಸಿ ಹೋಗಿ ವಿವಿಧ ಕಡೆ ಖಾಸಗಿಯಾಗಿ ಕೆಲಸ ಮಾಡಿದರು.
ನಂತರ ಊರಿಗೆ ಮರಳಿ ಬಂದು ದಾಂಪತ್ಯಕ್ಕೆ ಕಾಲಿಟ್ಟರೂ ಮದುವೆಯಾದರೂ ನಮ್ಮೂರಲ್ಲಿ ಅವರ ಸಹೋದರಿ (ಅಕ್ಕನ) ಮಗಳು ಇರುವುದರಿಂದಲೂ ಹಾಗೂ ಅವರ ದೊಡ್ಡಪ್ಪ ಕೂಡಾ ಶಿಕ್ಷಕರಾಗಿ ನಮ್ಮೂರಲ್ಲೆ ಇರುವುದರಿಂದ ಹಾಗೂ ಪ್ರಾಥಮಿಕ ಶಿಕ್ಷಣ ಹಲವು ವರ್ಷ ನಮ್ಮೂರಲ್ಲೇ ಮುಗಿಸಿದರು.ಹೀಗಾಗಿ ಇವರು ಸ್ವತಂತ್ರವಾಗಿ ವೈದ್ಯಕೀಯ ಸೇವೆ ಪ್ರಾರಂಭಿಸಿದರು.
ನಮ್ಮೂರಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಇದ್ದು ಹಣ ಮತ್ತು ಹೆಸರು ಎರಡನ್ನೂ ಸಂಪಾದಿಸಿದ್ದರು ನಂತರ ಸ್ವಂತದೊಂದು ಮನೆ ನಿರ್ಮಾಣ ಮಾಡಿ ಅವರ ಧರ್ಮಪತ್ನಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ಮುದ್ದಾದ ಎರಡು ಮಕ್ಕಳಿಗೆ ಜನ್ಮ ನೀಡಿದರು ನೆಮ್ಮದಿಯ ಸಂಸಾರದ ಬಂಡಿ ಸಾಗುಸುತ್ತಿದ್ದರು. ಶ್ರೀ ಗಳು ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಮೃದು ಮಾತಿನ ಸೂಕ್ಷ್ಮ ಮನಸಿನ ಶ್ರೀ ಗಳು ಹಲವಾರು ಜನರಿಗೆ ಸರಕಾರಿ ಕೆಲಸವು ಕೊಡಿಸಿದ್ದಾರೆ.ನಮ್ಮೂರ ಗ್ರಾಮ ದೇವತೆ ಗುಡಿ ಹಾಗೂ ಶ್ರೀ ನಂದೀಶ್ವರ ಮಠಕ್ಕೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿದ್ದರು.
ಸಂಸಾರದಿಂದ ಸನ್ಯಾಸತ್ವದ ಕಡೆಗೆ:
ಶ್ರೀ ಗಳು ಮೊದಲಿನಿಂದಲೂ ಆದ್ಯಾತ್ಮದ ಕಡೆ ಒಲವು ಇರುವುದರಿಂದ ಸಹಜವಾಗಿ ಶಾಂತಿ ನೆಮ್ಮದಿಗಾಗಿ ಯೋಗ ಹಾಗೂ ದೇವಿ ಪಾರಾಯಣ ಮಾಡುತ್ತಾ ಕ್ರಮೇಣ ಸಂಸಾರದಿಂದ ಸನ್ಯಾಸತ್ವದ ಕಡೆ ವಾಲಿದರು ಮುಂದೆ ಸಂಸಾರದ ಭವ ಬಂಧನ ಕೊಂಡಿ ಕಳಚಿಕೊಂಡರು ಸುಮಾರು ಹದಿನೈದು ವರ್ಷಗಳಿಂದ ಇಂದಿನವರೆಗೆ ಅಂದರೆ ಇಂದಿನ ಮೌನ ಅನುಷ್ಠಾನ ಇಪ್ಪತ್ತು ಮೂರನೇ ಮೌನ ಅನುಷ್ಠಾನವಾಗಲಿದೆ.
ರಾಜ್ಯದ ಮೂಲೆ ಮೂಲೆಗಳಲ್ಲಿ ಇವರ ಇಚ್ಚೆಯ ಪ್ರಕಾರ ಒಂದು ಎರಡು ಮೂರು ತಿಂಗಳು ಕೆಲವು ಕಡೆ ವರ್ಷಗಳ ಕಾಲ ಹಾಗೂ ಒಂದೊಂದು ಜಾಗದಲ್ಲಿ ಎರಡೆರಡು ಬಾರಿ ಕಠಿಣ ಮೌನ ಅನುಷ್ಠಾನ ಮಾಡುತ್ತಾ ದೇಹ ಹಾಗೂ ಮನಸ್ಸು ಎರಡನ್ನೂ ದಂಡಿಸುತ್ತಿದ್ದರು ಮುಂದೆ ಕ್ರಮೇಣ ಭಕ್ತರು ಬಂದಾಗ ಅವರಿಗೆ ತೋಚಿದ್ದನ್ನು ಭಕ್ತರಿಗೆ ಹೇಳಲು ಪ್ರಾರಂಭಿಸಿದರು ಕೆಲ ಭಕ್ತರಿಗೆ ಒಳ್ಳೆಯದೂ ಆಯಿತು ಹೀಗಾಗಿ ಭಕ್ತರು ಇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್