ಬೀದರ:ತಾಲ್ಲೂಕಿನ ಗುನ್ನಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಪ್ರಮುಖವಾಗಿ ಏಕೆಂದರೆ ಮೊಬೈಲ್ ಇಂಟರನೆಟ್ ಮುಖಾಂತರ ಎಷ್ಟೋ ಜನರು ಮೋಸ ಹೋಗುತ್ತಿದ್ದಾರೆ ಈಗ ಪ್ರತಿಯೊಬ್ಬರೂ ಕೂಡಾ ಮೊಬೈಲ್ ಗೆ ದಾಸರಾಗುತ್ತಿರುವುದು ವಿಷಾದನೀಯ ಇದರಿಂದ ಮಕ್ಕಳ ದೈಹಿಕ,ಮಾನಸಿಕ ಹಾಗೂ ಶಾರೀರಿಕವಾಗಿ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್ ಆಡುತ್ತಿದ್ದಾರೆ ಹೊಸ ಹೊಸ ಗೇಮ್ App ಮುಖಾಂತರ Download ಮಾಡಿಕೊಳ್ಳುತ್ತಿದ್ದಾರೆ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ ಮಕ್ಕಳು ಮೊಬೈಲ್ ಬಳಸಬಾರದು ಅವಶ್ಯಕವಿದ್ದಾಗ ಹಿರಿಯರ ಮುಖಾಂತರ ಬಳಸಬೇಕೆಂದು “ಸೈಬರ್ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ಗಳಿಸಿರುವ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಾಗಮೂರ್ತಿ ಪಾಂಚಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಮೊಬೈಲ್ ಬಳಕೆ ಹೆಚ್ಚಾಗಿವೆ ಅದನ್ನು ಬಳಸುವಾಗ ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು ಮಕ್ಕಳು ಆಟ ಆಡುವ App ಬಳಸಿ ಎಷ್ಟೋ ಮೋಸ ಹೋಗುತ್ತಿದ್ದಾರೆ ಆದುದ್ದರಿಂದ ಯಾವುದೆ App ಗಳಲ್ಲಿ ಅಥವಾ ಪರಿಚಯ ಇಲ್ಲದವರ ಜೊತೆ ಹಂಚಿಕೊಳ್ಳಬಾರದೆಂದು ಮಕ್ಕಳಿಗೆ ಲರ್ನಿಂಗ್ ಲಿಂಕ್ಸ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜೀಸ್ ಸಂಯೋಜಕರಾದ ಶ್ರೀ ದಯಾನಂದ ಹಿರೇಮಠ ಅವರು ಸೈಬರ್ ಸುರಕ್ಷತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಾಗಮೂರ್ತಿ ಪಾಂಚಾಲ್ ವಹಿಸಿದ್ದರು ಅತಿಥಿಗಳಾಗಿ ಶ್ರೀ ಬಲರಾಮ್ ಕುಲಕರ್ಣಿ,ಶ್ರೀ ನಯಿಮುದ್ದೀನ್,ಶ್ರೀ ದತ್ತಾತ್ರೇ, ಶ್ರೀಮತಿ ಕಲಾವತಿ,ಶ್ರೀಮತಿ ವೀಣೆ,ಶ್ರೀಮತಿ ಕಲ್ಪನಾ, ಶ್ರೀಮತಿ ರಾನಿಕಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೈಬರ್ ಸೆಕ್ಯುರಿಟಿ ಓಲಂಪಿಯಾಡ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು ಜೂಫಿ,ಆದಿತ್ಯ,ಸೃಷ್ಟಿ,ದೀಕ್ಷಾ, ಸತೀಶ್,ಮಹಿನ್ ಅವರಿಗೆ ಬಹುಮಾನ ವಿತರಿಸಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.