ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಲಬರ್ಗದ ಅನುಗ್ರಹ ಆಶ್ರಮದಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಯವರ ಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಒಂದು ಆಶ್ರಮದ ಹಬ್ಬದ ಆಚರಣೆಯಲ್ಲಿ ವoದನಿಯ ಫಾದರ್ ಫೆಡ್ರಿಕ್ ಡಿಸೋಜಾ ಖಜಾಂಚಿಗಳು ಗುಲ್ಬರ್ಗ ಧರ್ಮಕ್ಷೇತ್ರ,ವoದನೀಯ ಫಾದರ್ ರಾಕಿ ಡಿಸೋಜ ನಿರ್ದೇಶಕರು ಬಾಲಾ ಯೇಸು ದೇವಾಲಯ ಭಾಲ್ಕಿ,ವoದನಿಯ ಜೇಮ್ಸ್ ಪೌಲ್ ಡಾನ್ ಬಾಸ್ಕೋ ಬೀದರ್,ಅನುಗ್ರಹ ಆಶ್ರಮದ ಪ್ರಧಾನ ಗುರುಗಳಾದ ವoದನಿಯ ಫಾದರ್ ಸತೀಶ್ ಕುಮಾರ್,ಅನುಗ್ರಹ ಶಾಲೆಯ ಮುಖ್ಯ ಗುರುಗಳಾದ ವಂದದನೀಯ ಫಾದರ್ ಪ್ರಸನ್ನ ಕುಮಾರ್,ವoದನಿಯ ಫಾದರ್ ಲಾರೆನ್ಸ್, ಸಹ ಗುರುಗಳು ಸಿಸ್ಟರ್ಸ್ ರವರು,ಭಕ್ತಾದಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ದಿವ್ಯ ಬಲಿ ಪೂಜೆಯನ್ನು ವಂದದನಿಯ ಫಾದರ್ ಫೆಡ್ರಿಕ್ ಡಿಸೋಜರವರು ನಡೆಸಿಕೊಟ್ಟರು ಅವರು ಸಂತರ ಜೀವನದ ಆದರ್ಶವನ್ನು ನೆರೆದಿರುವವರಿಗೆ ತಿಳಿಸಿಕೊಟ್ಟರು ಬಲಿ ಪೂಜೆಯ ನಂತರ ಫಾದರ್ ಸತೀಶ್ ಕುಮಾರ್ ಅನುಗ್ರಹ ಆಶ್ರಮದ ಪ್ರಧಾನ ಗುರುಗಳು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿಕೊಟ್ಟ ಗುರುಗಳಿಗೆ ಸನ್ಮಾನಿಸಿ, ಎಲ್ಲರಿಗೂ ವಂದನಾರ್ಪಣೆಯನ್ನು ತಿಳಿಸಿದರು.
ವರದಿ-ಮಹಾನ್ ಕೋಟೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.