ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ:
ಮಿಷನ್(ಎನ್‌ಆರ್‌ಎಲ್‌ಎಂ)ಅಡಿಯಲ್ಲಿ ಸ್ಥಾಪಿತ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳ ಪುನಶ್ವೇತನಕ್ಕಾಗಿ ವಿವಿಧ ಶಾಲಾ ಸೌಲಭ್ಯ ನೀಡುವ ಯೋಜನೆ ಇದಾಗಿದ್ದು ಕೊಂಗರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ (ಎಮ್ ಬಿಕೆ) ಕೆಲಸ ಮಾಡುತ್ತಿರುವ ಕೊಂಗರಹಳ್ಳಿ ಗ್ರಾಮದ ಅಶ್ವಿನಿ ಎಂಬುವವರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪ ವ್ಯಕ್ತಪಡಿಸಿ ಮಹಿಳೆಯರು ಯುವಕರು ಪ್ರತಿಭಟನೆ ನಡೆಸಿದ್ದಾರೆ ಅಶ್ವಿನಿ ಎಂಬ ಮಹಿಳೆ ನರೇಗಾ ಕೂಲಿ ಕೆಲಸಕ್ಕೆ ಬಾರದೆ ಇರೋ ಮಹಿಳೆಯರ ಹೆಸರಲ್ಲೂ ಕೂಡಾ ಅಕ್ರಮ ಹಣ ಪಡೆದಿರುವುದಾಗಿ ಹಾಗು ಮಹಿಳೆಯರಿಗೆ ಸಂಘ ಸಂಸ್ಥೆಯಲ್ಲಿ ಸಾಲ ಸೌಲಭ್ಯ ಕೊಡಿಸುವಲ್ಲಿ ಹಲವಾರು ಮಹಿಳೆಯರ ಹತ್ತಿರ ಅಕ್ರಮ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿ ಎನ್ ಆರ್ ಎಲ್ ಎಮ್ ಸಂಸ್ಥೆಯ ಕೊಳ್ಳೇಗಾಲ ತಾಲೂಕು ವ್ಯವಸ್ಥಾಪಕರು ಐ ಮಣಿ ಎಂಬುವವರು ಜೊತೆಯಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಅಸಭ್ಯ ವರ್ತನೆ ಮಾಡುತ್ತಾರೆ ಎಂಬ ಆರೋಪ ವ್ಯಕ್ತಪಡಿಸಿ ಅವರ ವಿರುದ್ಧ ದಿಕ್ಕಾರ ಕೂಗುತ್ತಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಎಮ್ ಬಿ ಕೆ ಅಶ್ವಿನಿಯವರು ತಮ್ಮ ಜೊತೆ ಕೆಲಸ ಮಾಡುವ ಪರಿಶಿಷ್ಟ ಸಮುದಾಯದ ಸವಿತಾ ಎಂಬುವವರ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಮುಖ್ಯ ಪುಸ್ತಕ ಬರಹಗಾರ್ತೆಯರಾಗಿ ಕೆಲಸ ಮಾಡುವ ಇವರುಗಳು ಮಹಿಳೆಯರಿಗೆ ಸಾಲ ಸೌಲಭ್ಯ ಕೊಡಿಸುವ ನೆಪದಲ್ಲಿ ಸಾಲ ಕೊಡಿಸಿದ ನಂತರ ಹಣದ ಬೇಡಿಕೆ ಇಟ್ಟು ಭ್ರಷ್ಟಾಚಾರ ಮಾಡಲು ಇಳಿದಿದ್ದರೆ ಎಂಬ ಆರೋಪಗಳನ್ನು ಹಲವಾರು ಮಹಿಳೆಯರು ಮಾಡುತ್ತಿದ್ದಾರೆ ಮತ್ತು(ಎಂ ಬಿ ಕೆ) ಅಡಿಯಲ್ಲಿ ಕೆಲಸ ಮಾಡುವ ಎಲ್ ಸಿ ಆರ್ ಪಿ ಕೃಷಿ ಸಖಿಯರನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ ಮತ್ತು ಕೃಷಿ ತೋಟ ಮತ್ತು ಮಹಿಳಾ ಸಬಲೀಕರಣದ ಅಡಿಯಲ್ಲಿ ವಿವಿಧ ಸ್ವಉದ್ಯೋಗ ಮಾಡಲು ಸಾಲ ಸೌಲಭ್ಯಗಳು ದೊರೆಯುತ್ತವೆ ಅದರಲ್ಲೂ ಕೂಡಾ ಮಹಿಳೆಯರ ಹತ್ತಿರ ಸಾಲ ಕೊಡಿಸುವುದಾಗಿ ಹೇಳಿಕೊಂಡು ಅಕ್ರಮ ಹಣ ಪಡೆಯುತ್ತಿದ್ದಾರೆ. ಹಾಗೂ ಸಾರ್ವಜನಿಕರ ಹತ್ತಿರ ಅಸಭ್ಯತೆ ಮತ್ತು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಅನ್ಯಾಯ ಅಕ್ರಮವನ್ನು ಪ್ರಶ್ನೆ ಮಾಡುವವರನ್ನು ಬೆದರಿಸುತ್ತಿದ್ದಾರೆ ಎಂದು ಹಲವಾರು ಮಹಿಳೆಯರು ಮತ್ತು ಕೆಲವು ಯುವಕರು ಮುಖಂಡರುಗಳು ಆರೋಪ ಮಾಡಿದ್ದಾರೆ ಇನ್ನು ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಎ ಡಿ ಗೋಪಾಲಕೃಷ್ಣ ಮತ್ತು ಸಂಬಂಧ ಪಟ್ಟ ಎನ್ ಆರ್ ಎಲ್ ಎಮ್ ಸಂಸ್ಥೆಯ ತಾಲೂಕು ವ್ಯವಸ್ಥಾಪಕ ಐ ಮಣಿ ಆಗಮಿಸಿ ಸೂಕ್ತ ಪರಿಶೀಲನೆ ನಡೆಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೊಳ್ಳೇಗಾಲ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ನೀವುಗಳು ಆರೋಪ ಮಾಡುತ್ತಿರುವ ಅಶ್ವಿನಿ ಎಂಬುವವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಈ ಆರೋಪ ಇರುವುದರಿಂದ ಮುಂದಿನ
ಆದೇಶದವರೆಗೂ ಅಶ್ವಿನಿ ಎಂಬುವವರು ಯಾವುದೇ ಕಾರಣಕ್ಕೂ ಸೇವೆ ಸಲ್ಲಿಸಬಾರದು ಎಂದು ತಿಳಿಸಿದ್ದಾರೆ ಪ್ರತಿಭಟನಾ ನಿರತ ಮಹಿಳೆಯರು ಮುಖಂಡರು ಅಸ್ವಿನಿ ಎಂಬುವವರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು ಮೇಲಧಿಕಾರಿಗಳ ದೂರವಾಣಿ ಸಂಪರ್ಕಕ್ಕೂ ಸಿಗದೇ ಕರ್ತವ್ಯ ಉಲoಘನೆ ಮಾಡಿದ್ದೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು ಇನ್ನು ಈ ಸಂದರ್ಭದಲ್ಲಿ ಪಿಡಿಓ ಮಹೇಂದ್ರ ಕುಮಾರ್, ಕೊಂಗರಹಳ್ಳಿ ಪಂಚಾಯತ್ ಅಧ್ಯಕ್ಷರು ಚಿಕ್ಕಸ್ವಾಮಿ,ಪಂಚಾಯತ್ ಸದಸ್ಯರುಗಳಾದ ಕುಮಾರ್,ಮಹೇಶ್,ಕುಮಾರ್,ಮಹದೇವಸ್ವಾಮಿ, ಮಹದೇವಮ್ಮ ಗ್ರಾಮದ ಯುವ ಮುಖಂಡರಾದ ಶಿವು,ಮಹೇಶ್,ಆನಂದ್,ನಂಜುಂಡಸ್ವಾಮಿ,ಕೃಷ್ಣ,ಮಧು,ಮಹಿಳಾ ಮುಖಂಡರು ಜಾನಕಿ,ಸುಂದ್ರಮ್ಮ ಮತ್ತು ಗ್ರಾಮದ ಯುವಕರು ಮುಖಂಡರುಗಳು ಮಹಿಳೆಯರು ಇದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.