ಬೀದರ್:ಪಂಚಾಯತ್ ರಾಜ್ ಇಲಾಖೆ ನೀಡುವ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಅಣದೂರ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಗ್ರಾಪಂ ಅಧ್ಯಕ್ಷ ಮೀನಾಕ್ಷಿ ಮಾದಪ್ಪ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಡೊಣೆ ಅವರಿಗೆ ನೀಡಿ ಗೌರವಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸರಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ,ಮೂಲ ಸೌಕರ್ಯಗಳ ಅಭಿವೃದ್ಧಿ, ಆಡಳಿತದಲ್ಲಿ ಸುಧಾರಣೆ ಹಾಗೂ ಸ್ವಚ್ಛತೆ ಸಾಧನೆಗಾಗಿ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.ನರೇಗಾ ಯೋಜನೆ ಸದುಪಯೋಗ ಪಡೆದು ಹೊಲಗಳಲ್ಲಿ ರೈತರ ಬದು ನಿರ್ಮಾಣ,ಕೊಟ್ಟಿಗೆ,ಉತ್ತಮ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ,ಸಕಾಲ ಸೇವೆ,ಬಾಪೂಜಿ ಸೇವಾ ಕೇಂದ್ರ,ನರೇಗಾದಲ್ಲಿ ಮತ್ತು ಕಂದಾಯ ವಸೂಲಿಯಲ್ಲಿ ಸಾಧನ ಮಾಡಿದೆ.ನಿಯಮಿತವಾಗಿ ಗ್ರಾಮ ಸಭೆ,ವಾರ್ಡ್
ಸಭೆಗಳನ್ನು ನಡೆಸಿ ದೂರದೃಷ್ಟಿ ಯೋಜನೆಯನ್ನು ರೂಪಿಸಿದೆ.ಹಿರಿಯ ನಾಗರಿಕರು,ಅಂಗವಿಕಲರು, ಮಹಿಳೆಯರು ಮತ್ತಿತರ ಗುಂಪುಗಳ ಸಹಭಾಗಿ ತ್ವದಿಂದ ಸಮೀಕ್ಷೆ ಮತ್ತು ಚರ್ಚೆಗಳ ಮೂಲಕ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಢಣೆ ತಿಳಿಸಿದ್ದಾರೆ.
ಮಹಿಳಾ ದೌರ್ಜನ್ಯದ ವಿರುದ್ಧ ಜಾಗೃತಿ
ಗ್ರಾಮಗಳಲ್ಲಿ ಸಿಸಿ ರಸ್ತೆ,ಸಿಸಿ ಚರಂಡಿ ನಿರ್ಮಿಸಲಾಗಿದೆ ಖಾತರಿ ಯೋಜನೆಯಡಿ ಹೊಲಗಳಿಗೆ ಹೋಗಲು ದಾರಿ ನಿರ್ಮಾಣ ಮಾಡಲಾಗಿದೆ ಶುದ್ಧ ನೀರು ಪೂರೈಕೆಗೆ ಆದ್ಯತೆ ಕೊಡಲಾಗಿದೆ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ ಒಂದು ವರ್ಷದ ಅವಧಿಯಲ್ಲಿ ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಲಾಗಿದೆ ಮಕ್ಕಳ ಹಕ್ಕು ಹಾಗೂ ಮಹಿಳಾ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸುತ್ತಾರೆ.
ಅಭಿವೃದ್ಧಿ ಸಾಧನೆ ಪರಿಗಣಿಸಿ ಪಂಚಾಯತ್ ರಾಜ್ ಇಲಾಖೆ ಅಣದೂರ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಬರುವ ದಿನಗಳಲ್ಲಿ ಇನ್ನಷ್ಟು ಆಸಕ್ತಿಯಿಂದ ಹೆಚ್ಚು ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಿದೆ ಎಂದು ಮಲ್ಲಿಕಾರ್ಜುನ ಢೋಣೆ,ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರು ಹರ್ಷ ವ್ಯಕ್ತ ಪಡಿಸಿದರು
ಅದೆ ರೀತಿ ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ ಗಾಂಧಿ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ ಎಂದು ಅಣದೂರ ಗ್ರಾ.ಪಂ ಅಧ್ಯಕ್ಷರಾದ
ಮೀನಾಕ್ಷಿ ಮಾದಪ್ಪ ಅವರು ತಿಳಿಸಿದ್ದಾರೆ.
ವರದಿ:ಸಾಗರ್ ಪಡಸಲೆ