ಶಹಾಪುರ:ಹಳಿಸಗರ ಸೀಮೆಯಲ್ಲಿ ಬರುವ ನಂದಳ್ಳಿ ಆಂಜನೇಯ ದೇವಸ್ಥಾನ ಹತ್ತಿರ ರೈತರ ಹೊಲಗಳಿಂದ ದಿನ ನಿತ್ಯ ಅಕ್ರಮ ಮರಮ್ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಭೀಮಣ್ಣಗೌಡ ಕಟ್ಟಿಮನಿ ಹೇಳಿದರು.
ನಂದಳ್ಳಿ ಗ್ರಾಮಸ್ಥರು ನಮ್ಮ ಹೊಲಗಳಲ್ಲಿನ ಬೆಳೆಗಳು ನಾಶವಾಗುತ್ತಿವೆ ಇದರಿಂದ ಪರಿಸರ ನಾಶವಾಗುತ್ತಿದೆ ಎಂದು ನಂದಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ ಇಲ್ಲಿನ ಮರಮ್ ಸಾಗಾಣಿಕೆ ಮಾಡುತ್ತಿರುವುದರಿಂದ ಮಡ್ನಾಳ,ಶಿರವಾಳ, ಅಣಬಿ ಹಾಗೂ ಇನ್ನಿತರ ಪಕ್ಕದ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ದೊಡ್ಡ ಪ್ರಮಾಣದ ತೆಗ್ಗು ಗುಂಡಿಗಳು ಬಿದ್ದು ದ್ವಿಚಕ್ರ ವಾಹನಗಳು ಮತ್ತು ಕಾರು,ಜೀಪು,ಬಸ್ಸುಗಳು ಓಡಾಡದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಮರಮ್ ಸಾಗಾಣಿಕೆ ಮಾಡುತ್ತಿರುವರು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮಾನ್ಯ ಸಚಿವರೇ ಇತ್ತ ಕಡೆ ಗಮನ ಹರಿಸಿ ಅಕ್ರಮ ಮರಮ್ ಸಾಗಾಣಿಕೆ ಮಾಡುತ್ತಿರುವರ ವಿರುದ್ಧ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅಮಾನತು ಮಾಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷ ಭೀಮಣ್ಣಗೌಡ ಕಟ್ಟಿಮನಿ,ಹಣಮಂತ್ರಾಯ ಕಾಡಮಗೇರಾ,ತಾಲೂಕ ಅಧ್ಯಕ್ಷರಾದ ನಾಗರಾಜ ರಾಕಂಗೇರಾ,ಉಪಾಧ್ಯಕ್ಷರಾದ ಎಲ್ಲಪ್ಪ ಶಹಾಪುರ, ಅಂಗವಿಕಲರ ರಾಜ್ಯಾಧ್ಯಕ್ಷರಾದ ಸುಭಾಷ್ ಹೋತಪೇಠ,ಸೋಪಣ್ಣ ಸೈದಾಪುರ,ಭೀಮರಾಯ ರಾಜಾಪುರ,ಶರಣಪ್ಪ ವಡಗೇರಾ,ಅಯ್ಯಣ್ಣ ವಡಗೇರಾ,ಸಂಗಣ್ಣ ರಾಕಂಗೇರಾ ಎಲ್ಲರೂ ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.