ಕಲಬುರಗಿ/ನಾಲವಾರ:ಸಮೀಪದ ಕೊಲ್ಲೂರು ಗ್ರಾಮದ ಯುವಕ ಶ್ರೀ ರಾಜೇಂದ್ರ ಕೊಲ್ಲೂರು ರವರ ಕಿರುಚಿತ್ರ ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಸಾವಿರಾರು ಜನರು ಇಷ್ಟ ಪಡುತ್ತಿದ್ದಾರೆ,ಈಗಿನ ಯುವಕರಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದ್ದು ಇತ್ತಿಚೆಗೆ ಈ ಚಿತ್ರ ತಂಡಕ್ಕೆ ಸಾಲು ಸಾಲು ಸನ್ಮಾನಗಳಾಗುತ್ತಿವೆ, ರಾಜೇಂದ್ರ ಕೊಲ್ಲೂರು ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರ ಜೀವ್ನಾ ಅಂದ್ರೆ ಇಷ್ಟೇನಾ…?ಈ ಚಿತ್ರ ಭರ್ಜರಿಯಾಗಿ ಜನರು ಅಪ್ಪಿಕೊಂಡು ಯಶಸ್ವಿಯಾಗಿಸುತ್ತಿರುವ ಹಾಗೂ ಗ್ರಾಮೀಣ ಭಾಗದ ಯುವಕರ ಈ ಪ್ರಯತ್ನಕ್ಕೆ ಶುಭಹಾರೈಸುವ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡಕ್ಕೆ ಶ್ರೀ ಶ್ರೀ ಶ್ರೀ ಪ್ರಥಮ ಜಗದ್ಗುರು ಭವಾನ ವೇದವ್ಯಾಸ ಸಂಸ್ಥಾನ ಬ್ರಹ್ಮರ್ಷಿ ಪೀಠ ಹುರಸಗುಂಡಗಿ,ಸನ್ನತಿ ಬ್ರಿಡ್ಜ್ ನ ಪೀಠಾದಿಪತಿಗಾದ ಶ್ರೀ ಶ್ರೀ ಬ್ರಹ್ಮರ್ಷಿ ರಾಜು ಗುರು ಸ್ವಾಮಿಗಳಿಂದ ಗೌರವ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ನಮ್ಮ ಭಾಗದ ಯುವಕರು ಇದೇ ರೀತಿ ಇನ್ನೂ ಉತ್ತಮ ಸಾಮಾಜಿಕ ಸಂದೇಶಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸಿ ನಮ್ಮ ಮಠ ಹಾಗೂ ನಾವು ಸದಾ ನಿಮ್ಮ ಜೊತೆ ಇರ್ತೀವಿ ಎಂದು ಸ್ವಾಮೀಜಿಯವರು ಇಡೀ ಚಿತ್ರತಂಡಕ್ಕೆ ಹಿತ ನುಡಿಗಳನ್ನು ಹೇಳುತ್ತಾ ಇಡೀ ಚಿತ್ರ ತಂಡಕ್ಕೆ ಶುಭಾಶಯ ಹೇಳಿ ಆಶೀರ್ವಾದಿಸಿದರು,ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಶ್ರೀ ರಾಜೇಂದ್ರ ಕೊಲ್ಲೂರು,ಸಹ ನಟರು ಹಾಗೂ ಗೆಳೆಯರ ಪಾತ್ರಧಾರಿಗಳಾದ ಶ್ರೀ ದೇವಣ್ಣ ಚಿಗರಿ ಇಬ್ರಾಹಿಂಪೂರ,ವಿಜಯ ಅರಕೇರ,ಲಕ್ಷ್ಮಣ ನಾಲವಾರ,ಚಂದಾಸ್ ಸನ್ನತಿ ಹಾಗೂ ಅನೇಕ ಭಕ್ತಾಧಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.