ಯಾದಗಿರಿ:ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ ಕರೆಯಲಾಗಿತ್ತು.
ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷರಾದ ಮಲ್ಲಿನಾಥ್ ಬಡಿಗೇರ್ ಅವರು ವಹಿಸಿದರು. ಅತಿಥಿಗಳಾಗಿ ರಾಜ್ಯ ಸಂಘಟನಾ ಕಾರ್ಯ ದರ್ಶಿಯಾದ ಹೊನ್ನಪ್ಪ ಗಂಗನಾಳ ಕಲ್ಬುರ್ಗಿ, ವಿಭಾಗೀಯ ಅಧ್ಯಕ್ಷರಾದ ಸುಭಾಷ್ ತಳವಾರ್, ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಬೇವಿನಳ್ಳಿ ಉಪಸ್ಥಿತರಿದ್ದರು ಸಭೆಯಲ್ಲಿ ಹೋಬಳಿ ಶಾಖೆಯ ಅಧ್ಯಕ್ಷರಾಗಿ ಹನುಮಂತ ಕೊಂಬಿನ, ಉಪಾಧ್ಯಕ್ಷರಾಗಿ ಮಲ್ಲಪ್ಪ ರೆಡ್ಡಿ,ಸಂಘಟನಾ ಕಾರ್ಯ ದರ್ಶಿಯಾಗಿ ಅಂಬಣ್ಣ ಮಾಗನೂರು, ಭೀಮ್ ರೆಡ್ಡಿ ಮಡ್ನಾಳ್,ಪ್ರಧಾನ ಕಾರ್ಯ ದರ್ಶಿಯಾಗಿ ಮಂಜು ರೆಡ್ಡಿ,ಖಜಂಚಿಯಾಗಿ ಭೀಮರಾಯ ಬಡಿಗೇರ್,ಗ್ರಾಮ ಶಾಖೆ ಅಧ್ಯಕ್ಷರಾಗಿ ಶ್ರೀಶೈಲ್ ರೆಡ್ಡಿ,ಉಪಾಧ್ಯಕ್ಷರಾಗಿ ಅಂಬರೀಶ್ ಬಡಿಗೇರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ಸಂಘಟನೆ ಕಾರ್ಯದರ್ಶಿಯಾದ ಹೊನ್ನಪ್ಪ ಗಂಗನಾಳ ಅನುಮೋದನೆ ಮಾಡಿದರು ನಂತರ ದೋರನಹಳ್ಳಿ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಲಾಯಿತು ರಾತ್ರಿ ಸಮಯದಲ್ಲಿ ಯಾವುದೇ ಒಬ್ಬ ವೈದ್ಯರೂ ಕೂಡ ಇರುವುದಿಲ್ಲ ಎಂದು ದೋರನಹಳ್ಳಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕೂಡಲೇ ತಾಲೂಕ ವೈದ್ಯಾಧಿಕಾರಿಗಳಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಫೋನ್ ಕರೆ ಮಾಡಿದರೂ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಉತ್ತರ ನೀಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯವರು ಆರೋಪಿಸಿದರು ಆದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.