ಸೊರಬ:ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ವಿರುದ್ದ ಅಕ್ಷಮ್ಯವಾದ ಮಾತುಗಳನ್ನಾಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಸೊರಬ ತಾಲೂಕ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿ.ಎಸ್ ಯಡಿಯೂರಪ್ಪ ಮತ್ತು ಶಾಮನೂರು ಶಿವಶಂಕರಪ್ಪ ನಮ್ಮ ಸಮಾಜದ ಪ್ರಶ್ನಾತೀತ ನಾಯಕರು ವೀರಶೈವ ಸಮಾಜಕ್ಕೆ ಅವರಿಬ್ಬರ ಕೊಡುಗೆ ಅಪಾರವಾಗಿದೆ ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡವುದನ್ನು ನಾವು ಸಹಿಸುವುದಿಲ್ಲ.ಶಾಸಕ ಗೋಪಾಲ ಕೃಷ್ಣ ಬೇಳೂರು ಅವರನ್ನು ಶಾಸಕರನ್ನಾಗಿ ಮಾಡಿದ್ದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆತರುವುದಿಲ್ಲ ಅವರನ್ನು ಶಾಸಕರನ್ನಾಗಿ ಮಾಡಲು ಲಿಂಗಾಯಿತ ಸಮಾಜದ ಕೊಡುಗೆಯೂ ಸಾಕಷ್ಟು ಇದೆ ಎಂಬುದನ್ನು ಅವರು ಅರಿಯಬೇಕು ಇವರ ಹೇಳಿಕೆಯಿಂದ ರಾಷ್ಟ್ರಾದ್ಯಂತ ನಮ್ಮ ಸಮುದಾಯಕ್ಕೆ ಸಹಿಸಲಾಗದಷ್ಟು ನೋವುಂಟಾಗಿದೆ.ಆದ್ದರಿಂದ ತಕ್ಷಣ ಮುಖ್ಯಮಂತ್ರಿಗಳು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬಹಿರಂಗವಾಗಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಕ್ಷಮೆ ಕೇಳಬೇಕು, ಇಲ್ಲವಾದರೆ ಇದರ ಬಗ್ಗೆ ರಾಷ್ಟ್ರಾದ್ಯಂತ ಸಮುದಾಯವು ಹೋರಾಟವನ್ನು ನಡೆಸುವುದು ಮತ್ತು ಬೆಂಗಳೂರಿನ ಅವರ ನಿವಾಸದ ಮುಂದೆ ಧರಣಿ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮುಖ್ಯ ಬೀದಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ.ಈರೇಶಗೌಡ,ತಾಲೂಕು ಅಧ್ಯಕ್ಷ ಪಂಚಾಕ್ಷರಯ್ಯ ಬೆದವಟ್ಟಿ ಪ್ರಮುಖರಾದ ಅಶೋಕ ನಾಯ್ಕ್ ಅಂಡಿಗೆ,ನಾಗರಾಜ ಗುತ್ತಿ,ನಟರಾಜ್ ಉಪ್ಪಿನ್,ಚಂದ್ರಶೇಖರ ನಿಜಗುಣ, ವಿಜಯಕುಮಾರ ನೇರಲಗಿ,ವಿಶ್ವನಾಥ್, ಲಿಂಗರಾಜ.ಡಿ,ಆಶಿಕ್ ನಾಗಪ್ಪ,ಸಂದೀಪ್, ಮಲ್ಲೇಶಗೌಡ,ನಿರಂಜನ,ಪ್ರಕಾಶ್,ಪ್ರದೀಪ್ ಗೌಡ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ:ಸಂದೀಪ ಯು.ಎಲ್,ಕರುನಾಡ ಕಂದ ನ್ಯೂಸ್,ಸೊರಬ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.