ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ
ಸುಳ್ಳೇರಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಕಾಂಚಳ್ಳಿ ಹಾಗೂ ಪಚ್ಚೆದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಕೆರೆಯಂತೆ ನಿಂತಿದ್ದ ನೀರಿನ ಬಗ್ಗೆ ಇಂದು ಬೆಳಿಗ್ಗೆ ಕರುನಾಡ ಕಂದ ಸುದ್ದಿ ಜಾಲತಾಣದಲ್ಲಿ ವರದಿ ಮಾಡಲಾಗಿತ್ತು ಇದು ತಮ್ಮ ಗಮನಕ್ಕೆ ಬಂದ ತಕ್ಷಣ ಖುದ್ದಾಗಿ ಸ್ಥಳದಲ್ಲೇ ನಿಂತು ತಾವೇ ದುರಸ್ತಿ ಪಡಿಸಲು ಮುಂದಾದ ಪಂಚಾಯತಿ ಅಧ್ಯಕ್ಷರು ಮುತ್ತುರಾಜು ಅವರ ಕಾರ್ಯ ವೈಖರಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
