ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಶ್ವಗಂಗಾ ಸೇವಾ ಸಂಸ್ಥೆ ಯಾದಗಿರಿ ವತಿಯಿಂದ ಜೀವ್ನಾ ಅಂದ್ರೆ ಇಷ್ಟೇನಾ…? ಕಿರುಚಿತ್ರ ತಂಡಕ್ಕೆ ಗೌರವ ಸನ್ಮಾನ

ಯಾದಗಿರಿ:ಆರ್.ಕೆ.ಪ್ರೊಡಕ್ಷನ್ ನ ಮೊದಲ ಕಿರುಚಿತ್ರ ಜೀವ್ನಾ ಅಂದ್ರೆ ಇಷ್ಟೇನಾ…?ಈ ಚಿತ್ರವು ತುಂಬಾ ಜನ ಮನ್ನಣೆ ಗಳಿಸಿ ಜನರಿಗೆ ತುಂಬಾ ಇಷ್ಟ ಆಗುತ್ತಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ಇರುವ ಈ ಕಿರುಚಿತ್ರ ಜನರು ತುಂಬಾ ಸಂತೋಷದಿಂದ ಇಷ್ಟ ಪಟ್ಟು ಈ ಚಿತ್ರತಂಡಕ್ಕೆ ಸಾಲು ಸಾಲು ಸನ್ಮಾನಗಳನ್ನು ಮಾಡುತ್ತಾ ಬೆಂಬಲ ನೀಡುತ್ತಿದ್ದಾರೆ,ಈ ಚಿತ್ರ ಬಿಡುಗಡೆ ಆಗಿ ಒಂದು ವಾರ ಆಯಿತು,ಚಿತ್ರತಂಡಕ್ಕೆ ಇಲ್ಲಿವರೆಗೆ 4 ಕಡೆ ಸನ್ಮಾನ ಕಾರ್ಯಕ್ರಮಗಳು ನಡೆದಿವೆ,ಅದೇ ಸಾಲಿನಲ್ಲಿ ನಿನ್ನೆ ಯಾದಗಿರಿ ನಗರದ ವಿಶ್ವಗಂಗಾ ಸೇವಾ ಸಂಸ್ಥೆ ಚಿತ್ರತಂಡಕ್ಕೆ ಗೌರವ ಸನ್ಮಾನ ನೆರವೇರಿಸಿದೆ.ಈ ಚಿತ್ರದ ನಿರ್ಮಾಪಕರು ಹಾಗೂ ನಾಯಕ ನಟರಾದ ಶ್ರೀ ರಾಜೇಂದ್ರ ಕೊಲ್ಲೂರು ಅವರ ಮೊದಲ ಕಿರುಚಿತ್ರ ಯಶಸ್ವಿಯಾಗಿ ಇನ್ನೂ ಉತ್ತಮ ರೀತಿಯಲ್ಲಿ ಹೆಸರು ಮಾಡಲಿ ಎಂದು ವಿಶ್ವಗಂಗಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಅಬ್ಬೆ ತುಮಕೂರ ರವರು ಆಶಿಸಿದರು ಈ ಸಂದರ್ಭದಲ್ಲಿ ಚಿತ್ರತಂಡದ ನಾಯಕ ನಟರು ರಾಜೇಂದ್ರ ಕೊಲ್ಲೂರು,ಸಹ ನಟರು ದೇವಣ್ಣ ಚಿಗರಿ ಇಬ್ರಾಹಿಂಪೂರ,ವಿಜಯ ಅರಕೇರಾ ಬಿ, ಲಕ್ಷ್ಮೀಕಾಂತ ನಾಲವಾರ,ವಿಶ್ವಗಂಗಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಅಬ್ಬೆತುಮಕೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನಾಗೇಂದ್ರ ಗಮಗಾ,ಪವಿತ್ರ ಕಂಪ್ಯೂಟರ್ ಸೆಂಟರ್ ನ ಮುಖ್ಯಸ್ಥರು ಶ್ರೀ ಮಾರ್ಕಪ್ಪ ಬಾಚವಾರ ಹಾಗೂ ಅನೇಕ ಸಮಾಜದ ಮುಖಂಡರು ಮತ್ತು ಗೆಳೆಯರ ಬಳಗವು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ