ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನ ವಿರೋಧಿ,ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮಾರುತಿ ದೇವಸ್ಥಾನದಿಂದ ಆರಂಭಗೊಂಡ ಪತ್ರಿಭಟನೆ ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಆಡಳಿತ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು ಲಜ್ಜೆ ಗೆಟ್ಟ ಕಾಂಗ್ರೆಸ್ ಸರಕಾರ ಇಂದು ಮಳೆ ಬಾರದೆ ಇರುವುದರಿಂದ ಬರಗಾಲದ ಸಮಸ್ಯೆ,ವಿದ್ಯುತ್ ಇಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಲೋಡ್ ಶೆಡ್ಡಿಂಗ್,ರೈತರ ಸಂಬಂಧಿ ಯೋಜನೆಗಳನ್ನು ರಾಜ್ಯದ ಮುಖ್ಯಮಂತ್ರಿ ಬಜೆಟ್ ನಿಂದ ಕೈಬಿಟ್ಟಿದ್ದು ಹಾಗೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬಿಜೆಪಿ ಯುವ ಮುಖಂಡ ಅಮೀನರೆಡ್ಡಿ ಯಾಳಗಿಯವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ,ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೊನೇರ್,ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ,ಹಿರಿಯ ಮುಖಂಡರಾದ ಬಸವರಾಜಪ್ಪ ಗೌಡ ವಿಭೂತಿಹಳ್ಳಿ, ರಾಜಶೇಖರ ಗೂಗಲ್,ಶಿವರಾಜ ದೇಶಮುಖ,ಬಸವರಾಜ ಅರುಣಿ,ರಂಗಪ್ಪ ಜಿರಲೆ, ಮಹೇಶ ರಸ್ತಾಪುರ,ಯಲ್ಲಯ್ಯ ನಾಯಕ್ ವನದುರ್ಗ,ಉಮೇಶ್ ಮಹಾಮನಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
