ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಇಜೇರಿ ಕೆಜಿಬಿ ಬ್ಯಾಂಕ್ ಮನೆ ಮನೆಗೆ ಬೆಳೆ ಸಾಲ ಯೋಜನೆ ಅಭಿಯಾನ

ಕಲಬುರ್ಗಿ:ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ,ಆರ್ಥಿಕ ಸಾಕ್ಷರತಾ ಅಭಿಯಾನ ಕಾರ್ಯಕ್ರಮ ಅಂಗವಾಗಿ ಕೆಜಿಬಿ ಬ್ಯಾಂಕ್ ನಿಂದ ಮನೆ ಮನೆಗೆ ಬೆಳೆ ಸಾಲ ಯೋಜನೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಇಜೇರಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ಜರುಗಿತು.
ಈ ಮನೆ ಮನೆಗೆ ಬೆಳೆ ಸಾಲ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ರಾಜಾ ಬಾಕ್ಸರ್ ಮಹಾದ್ವಾರದಿಂದ ಗ್ರಾಮ ಪಂಚಾಯವರೆಗೆ ವಿವಿಧ ಕಲಾತಂಡ ಮತ್ತು ಶಾಲಾ ಮಕ್ಕಳ ನೃತ್ಯ ತಂಡದೊಂದಿಗೆ ಅದ್ದೂರಿ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ತದನಂತರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಆಲೂರು ಹಿರೇಮಠದ ಕೆಂಚ ವೃಷಭೇಂದ್ರ ಶಿವಾಚಾರ್ಯರು,ಸಾಥಖೇಡದ ರಾಜಾ ಬಾಕ್ಸರ್ ಸಂಸ್ಥಾನದ ಜೈ ಈರಣ್ಣ ಮುತ್ಯಾ, ಐಖಾಜಾ ಅಮೀನೋದ್ದಿನ್ ದರ್ಗಾ ಇಜೇರಿಯ ಸೈಯದ್ ಇಸ್ಮಾಯಿಲ್ ಹುಸೇನ್ ಸಜ್ಜಾದ್ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕೆಜಿಬಿ ಬ್ಯಾಂಕಿನ ಮಹಾ ಪ್ರಬಂಧಕರಾದ ಭಾನುಮೂರ್ತಿ ಕೇಸರಿ,ಇದೀಗ ಕರ್ನಾಟಕ ಗ್ರಾಮೀಣ ಬ್ಯಾಂಕ್ 75 ಕೋಟಿ ವ್ಯವಹಾರ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ ಎಲ್ಲಾ ರೈತರ ಗ್ರಾಹಕರ ಸಹಾಯದಿಂದ 100 ರಿಂದ 150 ಕೋಟಿ ವ್ಯವಹಾರ ನಡೆಸುವಂತೆ ಆಗಲಿ, ರೈತರು ದಿನಂಪ್ರತಿಯಾಗಿ ಯಾವುದೇ ಕಟ್ಟು ಬಾಕಿ ಇಲ್ಲದೆ ನಗದು ವ್ಯವಹಾರ ನಡೆಸುವ ಮೂಲಕ ಕೆಜಿಬಿ ಬ್ಯಾಂಕಿನ ಆರ್ಥಿಕ ಮುನ್ನಡೆಗೆ ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಎಲ್ಲಾ ರೈತರು ನಗದು ವ್ಯವಹಾರ ನಡೆಸುವುದರಿಂದ ಸಿಬಿಲ್ ಸ್ಕೋರ್ ವೃದ್ಧಿಯಾಗುತ್ತದೆ ಹಾಗೂ ಉತ್ತಮ ಅಂಕ ಗಳಿಸುತ್ತೀರಿ ಹಾಗೂ ಎಲ್ಲಾ ರೈತರು ಓಟಿಎಸ್ ಮಾಡುವ ಮೂಲಕ ಇಂದಿನ ಎಲ್ಲಾ ಬಾಕಿ ಇರುವ ಸಾಲವನ್ನು ಮುಕ್ತ ಮಾಡಿಕೊಳ್ಳುವುದರ ಮೂಲಕ ಕೆಜಿಬಿ ಬ್ಯಾಂಕಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ರೈತರು,ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಜನರನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಾರ್ಗದರ್ಶನ ಮತ್ತು ಪ್ರಾಯೋಜಕತ್ವವನ್ನು ಜಿಲ್ಲಾ ವ್ಯವಸ್ಥಾಪಕರಾದ ಸದಾಶಿವ್ ರಾತ್ರಿಕರ್,ಕೆಜಿಬಿ ಯಾದಗಿರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಗುರುಪಾದಯ್ಯ ಸ್ವಾಮಿ ಕೊಡ್ಲಿ,ಮುಖ್ಯ ಅತಿಥಿಗಳಾಗಿ ಇಜೇರಿ ಗ್ರಾಮ ಪಂಚಾಯತಿಯ ಮೆಹಿಬೂಬ್ ಸಾಬ್ ಸೌದಗಾರ್,ಸಮ್ಮದ್ ಪಟೇಲ್,ಸಿದ್ಧೇಶ್ವರಪ್ಪ ಜಿ.ಬಿ,
ಲಾಲಯ್ಯ ಗುತ್ತೇದಾರ್ ಭಾಗವಹಿಸಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಸಪ್ಪ ಗೌನಳ್ಳಿ ಹಿರಿಯ ಪ್ರಬಂಧಕರು ಕೆಜಿಬಿ ಬ್ಯಾಂಕ್,ಅಭಿವೃದ್ಧಿ ಅಧಿಕಾರಿಗಳಾದ ನಂದುಕುಮಾರ್ ದೊರೆ,ಬಿ ಪಿ ಸುಬೇದಾರ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇಜೇರಿ ಸಿಬ್ಬಂದ ವರ್ಗದವರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ