ಬೆಂಗಳೂರು:ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿಕೊಂಡು ಒಬ್ಬ ವ್ಯಕ್ತಿಯನ್ನು ಅಪಹರಣ ಮಾಡಿ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟ ಗುಂಪನ್ನು ಸಿ.ಸಿ.ಬಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಮೊಹಮ್ಮದ್ ಖಾಸಿಂ ಮುಜಾಹಿದ್,ಮುಕ್ತಿಯಾರ್,ವಸಿಂ,ಶಬ್ಬೀರ್ ಹಾಗೂ ಶೋಯಿಬ್ ಇದರಲ್ಲಿ ಒಬ್ಬ ಆರೋಪಿ ಮೊಹಮ್ಮದ್ ಖಾಸಿಂ ಮುಜಾಹಿದ್ ಸಿ.ಸಿ.ಬಿ ಪೋಲಿಸ ಆಯುಕ್ತ ನಾಗಿದ್ದು. ಈತನು ಸಿ.ಸಿ.ಬಿ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದನು.ಮೊಬೈಲ್ ಶಾಪ್ ಮಾಲಿಕ ಕಾಲು ಸಿಂಗ್ ಅವರನ್ನು ಸೆಪ್ಟಂಬರ್ 2 ರಂದು ಕಾರಿನಲ್ಲಿ ಬರುತ್ತಿದ್ದಾಗ ವಿ.ವಿ ಪುರಂ ಬಳಿ ಅಪಹರಣಕಾರರು ಆತನನ್ನು ಅಡ್ಡಗಟ್ಟಿ ಸುತ್ತುವರಿದು ಕಾಲು ಸಿಂಗ್ ಅವರನ್ನು ಹೆದರಿಸಿ ಆತನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿ ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿಕೊಂಡು. ನೀನು ಗಾಂಜಾ ಸರಬರಾಜು ಮಾಡುತ್ತಿದ್ದೀಯಾ ಎಂಬ ಖಚಿತ ಮಾಹಿತಿ ಇದೆ ಎಂದು ಹೆದರಿಸಿ ಕಾಲು ಕಣ್ಣಿಗೆ ಬಟ್ಟೆ ಕಟ್ಟಿ ವಿಲ್ಸನ್ ಗಾರ್ಡನ್ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ.
ಮನೆಯಲ್ಲಿ ಕೂಡಿ ಹಾಕಿದ ಮೇಲೆ ಕಾಲು ಸಿಂಗ್ ಗೆ ಮಾರಕಾಸ್ತ ತೋರಿಸಿ ಬೆದರಿಸಿ ಆತನ ಮೊಬೈಲ್ ನಿಂದ ಆತನ ಗೆಳೆಯನಿಗೆ ಫೋನ್ ಮಾಡಿ ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿ ಕಾಲು ಸಿಂಗ್ ಗೆಳೆಯನಿಗೆ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟರು ಕೈ ಕಾಲು ಮುಗಿದರೂ ಬಿಡದೆ ಕಾಲು ಸಿಂಗ್ ಗೆಳೆಯರಿಗೆ ಪರಿಚಿತ ಪೋಲಿಸರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸಿ.ಸಿ.ಬಿ ಪೋಲಿಸರಿಗೆ ಮಾಹಿತಿ ಸಿಕ್ಕಿದೆ ಎಂದು ಅರಿತ ಅಪಹರಣಕಾರರು ಕಾಲು ಸಿಂಗ್ ಅವರನ್ನು ಬಿಟ್ಟು ಹೋಗಿದ್ದಾರೆ.
ಮಾಹಿತಿ ತಿಳಿದು ವಿ.ವಿ ಪುರಂ ಪೋಲಿಸ ಠಾಣೆಯಲ್ಲಿ ದೂರ ದಾಖಲು ಮಾಡಿದರು ಎನ್.ಸಿ.ಆರ್ ದಾಖಲಿಸಿಕೊಂಡು ವಿ.ವಿ ಪುರಂ ಪೋಲಿಸ ಠಾಣೆಯ ಅಧಿಕಾರಿಗಳು ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.